14.2 C
Munich
Home ಕ್ರೈಮ್‌ ಹಳೇಬೀಡಿನಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು

ಹಳೇಬೀಡಿನಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು

50 ಆಳಕ್ಕೆ ಉರುಳಿಬಿದ್ದ ಟ್ರ್ಯಾಕ್ಟರ್

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬೇಲೂರು ತಾಲ್ಲೂಕಿನ, ಹಳೇಬೀಡು ಕೆರೆ ಏರಿ ಮೇಲೆ ನಡೆದಿದೆ.

ಬಿ.ಪಿ.ಓಂಕಾರ್ (55) ಮೃತಪಟ್ಟ ಚಾಲಕ
ಜಮೀನಿನಿಂದ ವಾಪಸ್ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರ ತಪ್ಪಿದ ಟ್ರ್ಯಾಕ್ಟರ್, ಸುಮಾರು ಐವತ್ತು ಅಡಿ ಆಳಕ್ಕೆ ಉರುಳಿ ಬಿತ್ತು.

ಟ್ರ್ಯಾಕ್ಟರ್‌ನಡಿ ಸಿಲುಕಿದ ಓಂಕಾರ್ ಸ್ಥಳದಲ್ಲೇ ಸಾವಿಗೀಡಾದರು. ಸ್ಥಳಕ್ಕೆ ಹಳೇಬೀಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

error: Content is protected !!