19.5 C
Munich
Home News ಹಾಸನ: ರೆಡ್ ಕ್ರಾಸ್ ವತಿಯಿಂದ ನಿವೃತ್ತ ಪೊಲೀಸರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹಾಸನ: ರೆಡ್ ಕ್ರಾಸ್ ವತಿಯಿಂದ ನಿವೃತ್ತ ಪೊಲೀಸರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

On 04-10-2025, a free medical health check-up camp was organized by the Indian Red Cross Society District Hassan Branch for the members of the Karnataka State Police Retired Employees Association, Hassan and their family members.

ಹಾಸನ: 04-1೦-2025ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಹಾಸನ ಶಾಖೆಯ ವತಿಯಿಂದ ಕರ್ನಾಟಕ ರಾಜ್ಯ ಆರಕ್ಷಕ ನಿವೃತ್ತ ನೌಕರರ ಸಂಘ ಹಾಸನದ ಸದಸ್ಯರುಗಳಿಗೆ ಹಾಗೂ ಕುಟುಂಬ ವರ್ಗದವರಿಗೆ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಡಾ.ರಂಗಲಕ್ಷ್ಮಿ ಆರ್.ಎನ್. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಿಂದ ಮಹಿಳೆಯರ ಆರೋಗ್ಯ ತಪಾಸಣೆ, ಜನಪ್ರಿಯ ಆಸ್ಪತ್ರೆಯ ಮೂಳೆ ರೋಗ ತಜ್ಞರಾದ ಡಾ. ಅಬ್ದುಲ್ ಬಷೀರ್ ಮತ್ತು ವೈದ್ಯ ತಂಡದ ರವರಿಂದ ಕೀಲು-ಮೂಳೆ ರೋಗ ತಪಾಸಣೆ, ಜಿಲ್ಲಾ ಎನ್.ಸಿ.ಡಿ ತಂಡದ ವತಿಯಿಂದ ಬಿ.ಪಿ, ಶುಗರ್ ತಪಾಸಣೆ ಮತ್ತು ಡಾ. ಮಹಿತಾ (ಫಿಜಿಶಿಯನ್) ಹಾಗೂ ಡಾ. ಮಹೇಶ್ (ಫಿಜಿಶಿಯನ್) ಆರೋಗ್ಯ ತಪಾಸಣೆ ಮಾಡಿದರು.

ಹಾಸನಾಂಬ ದಂತ ವೈದ್ಯಕೀಯ ಕಾಲೇಜಿನ ದಂತ ತಜ್ಞರಿಂದ ದಂತ ತಪಾಸಣೆ, ಡಾಕ್ಟರ್ ಅಗರ್ವಾಲ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ತಪಾಸಣೆ ಮಾಡಲಾಯಿತು. ಈ ಶಿಬಿರದಲ್ಲಿ ಒಟ್ಟು 17೦ಕ್ಕೂ ಹೆಚ್ಚಿನ ಜನರ ತಪಾಸಣೆ ಮಾಡಲಾಯಿತು ಹಾಗೂ ಇದೇ ಶಿಬಿರದಲ್ಲಿ ಒಟ್ಟು 16ಜನರು ನೇತ್ರದಾನ ಮಾಡಲು ಬಯಸಿ ನೋಂದಣಿ ಮಾಡಿಸಿಕೊಂಡರು.

ಈ ಶಿಬಿರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ತಮ್ಮಯ್ಯ ನವರು ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿದರು ಮತ್ತು ಕಾರ್ಯಕ್ರಮದ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್, ನಿವೃತ್ತ ಪೊಲೀಸ ಸಂಘದ ಅಧ್ಯಕ್ಷರಾದ ಶ್ರೀ ದೊಡ್ಡೇಗೌಡ, ಕಾರ್ಯದರ್ಶಿ ಚಂದ್ರೇಗೌಡ, ನಾಗರಾಜು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಶಬ್ಬೀರ್ ಅಹ್ಮದ್, ಜಯೇಂದ್ರಕುಮಾರ್, ಎಚ್.ಡಿ ಕುಮಾರ್, ಅಮ್ಜದ್ ಖಾನ್, ಉದಯ್ ಕುಮಾರ್, ಮಮತಾ ಪಾಟೀಲ್ , ಗಿರೀಶ್, ಭೀಮ್ ರಾಜ್, ಆರಿಫ್, ಸುನಂದಮ್ಮ, ಹರ್ಷಿತ್, ಚಂದನ್ ಹಾಗೂ ಅವಿನಾಶ್ ಇತರರಿದ್ದರು.

error: Content is protected !!