8.9 C
Munich
Home News ಬೆಂಗಳೂರು: ಆರ್ ಎಸ್ ಎಸ್ ಅನ್ನು ಯಾರೂ ಸಹ ಬ್ಯಾನ್ ಮಾಡೋಕೆ ಆಗಲ್ಲ- ಸಚಿವ ಸತೀಶ್...

ಬೆಂಗಳೂರು: ಆರ್ ಎಸ್ ಎಸ್ ಅನ್ನು ಯಾರೂ ಸಹ ಬ್ಯಾನ್ ಮಾಡೋಕೆ ಆಗಲ್ಲ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಮಾರ್ಚ್,9,2026 (www.kannadapost.com): ಆರ್.ಎಸ್.ಎಸ್ ಮುಗಿಸುತ್ತೇವೆ ಎನ್ನುವವರು ಭ್ರಮೆಯಲ್ಲಿದ್ದಾರೆ. ನಮ್ಮ ಸಂಘಟನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂಬ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆ ಕುರಿತು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ಆರ್ ಎಸ್ ಎಸ್ ಬ್ಯಾನ್ ಮಾಡುತ್ತೇವೆ ಅಂತಾ ಯಾರೂ  ಹೇಳಿಲ್ಲ. ಯಾರು ಸಹ ಆರ್ ಎಸ್ ಎಸ್ ಬ್ಯಾನ್ ಮಡೋಕೆ ಆಗಲ್ಲ ಎಂದರು.

ಆರ್ ಎಸ್ ಎಸ್  ಚಟುವಟಿಕೆಗಳ ಮೇಲೆ ನಿಷೇಧ ಬೇರೆ, ಇದು ಬೇರೆ. ಆರ್ ಎಸ್ ಎಸ್ ಅನ್ನು ಇದುವರೆಗೆ ಯಾರೂ ಕೂಡ ಬ್ಯಾನ್ ಮಾಡಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

error: Content is protected !!