14.6 C
Munich
Home News Politics ತೆಂಗು ಬೆಳೆಗೆ ರೋಗ: ಕೃಷಿ ಸಚಿವರ ಗಮನ ಸೆಳೆದ ಸೋಮಣ್ಣ

ತೆಂಗು ಬೆಳೆಗೆ ರೋಗ: ಕೃಷಿ ಸಚಿವರ ಗಮನ ಸೆಳೆದ ಸೋಮಣ್ಣ

New Delhi: Union Minister of State for Railways and Jal Shakti V. Somanna, who was on a tour of Hassan district, has convinced Union Agriculture Minister Shivraj Singh Chouhan of the problems faced by farmers in the district.

ನವದೆಹಲಿ: ಹಾಸನ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ನವದೆಹಲಿಯಲ್ಲಿ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರನ್ನು ಭೇಟಿ ಮಾಡಿದ ಅವರು, ತುಮಕೂರು ಹಾಗು ಹಾಸನದ ಪ್ರವಾಸದ ಸಂದರ್ಭದಲ್ಲಿ ತೆಂಗು ಬೆಳೆಗೆ ಹರಡುತ್ತಿರುವ ಬಿಳಿ ನೋಣ, ಕಾಂಡ ರಸ ಸೋರುವುದು ಹಾಗು ಗ್ಯಾನೋಡರ್ಮ ಸೇರಿ ವಿವಿಧ ಕೀಟ ಮತ್ತು ರೋಗಗಳ ಕುರಿತು ರೈತರು ಮಾಹಿತಿ ನೀಡಿದ್ದನ್ನು ಸಚಿವರ ಗಮನಕ್ಕೆ ತಂದರು.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಜ್ಞಾನಿಗಳ ಮತ್ತು ಅಧಿಕಾರಿಗಳನ್ನೊಳಗೊಂಡ ತಂಡವನ್ನು ಈ ಭಾಗಕ್ಕೆ ನಿಯೋಜಿಸಬೇಕು. ತಿಟಪೂರಿನಲ್ಲಿ ತೆಂಗಿನಕಾಯಿ ಸಂಶೋಧನಾ ಸಂಸ್ಥೆ ಸ್ಥಾಪಿಸಬೇಕು. ತುಮಕೂರು ಜಿಲ್ಲೆಯ ತೆಂಗು ಬೆಳೆಗಾರರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ಜರುಗಿಸಬೇಕು ಎಂದು ಸಚಿವ ಸೋಮಣ್ಣ ಅವರು ಮನವಿ ಮಾಡಿದ್ದಾರೆ.

ಮನವಿಗೆ ಸಕಾರಾತಕವಾಗಿ ಸ್ಪಂದಿಸಿರುವ ಚವ್ಹಾಣ್‌ ಅವರು, ಅಗತ್ಯ ಕ್ರಮ ಜರುಗಿಸುವಂತೆ ಸಭೆಯಲ್ಲಿ ಹಾಜರಿದ್ದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತಪರ ಕೆಲಸ ಮಾಡಲು ಸನ್ನದ್ಧವಾಗಿದೆಯೆಂದು ವಿ. ಸೋಮಣ್ಣ ತಿಳಿಸಿದ್ದಾರೆ.

error: Content is protected !!