New delhi| ನವದೆಹಲಿ | ಕನ್ನಡಪೋಸ್ಟ್ ವರದಿ
ರಾಜ್ಯ ಸರ್ಕಾರಿ ನೌಕರರ ಸಂಘದ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ನಾಟಕ ವಿಭಾಗದಲ್ಲಿ ಹಾಸನ ಜಿಲ್ಲಾ ತಂಡವು ದ್ವಿತೀಯ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದೆ.
ನವದೆಹಲಿಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಿಂದ ಆಯ್ಕೆಯಾಗಿದ್ದ ಈ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದ್ದು, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.
ಎಚ್ಡಿಡಿ, ಎಚ್ಡಿಕೆ ಅಭಿನಂದನೆ
ಈ ಸಾಧನೆಗೈದ ತಂಡವನ್ನು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿನಂದಿಸಿದ್ದು, ನವದೆಹಲಿಯ ತಮ್ಮ ನಿವಾಸದಲ್ಲಿ ತಂಡದ ಸದಸ್ಯರನ್ನು ಭೇಟಿ ಮಾಡಿ ಶುಭಾಶಯ ಕೋರಿದರು.
ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೂಡ ತಮ್ಮ ನಿವಾಸದಲ್ಲಿ ತಂಡವನ್ನು ಅಭಿನಂದಿಸಿ ಗೌರವಿಸಿದರು.
“ಸಂಜೆ ಹಾಡು” ನಾಟಕ ಮೆರೆದ ಸಾಧನೆ
ರಾಜೇಂದ್ರ ಕಾರಂತ್ ರಚನೆಯ “ಸಂಜೆ ಹಾಡು” ನಾಟಕವನ್ನು ಶಿಕ್ಷಕ ಹಾಗೂ ರಂಗಕರ್ಮಿ ಜಯಶಂಕರ ಬೆಳಗುಂಬ ನಿರ್ದೇಶನ ಮಾಡಿದ್ದು,
ನಾಟಕದಲ್ಲಿ ಜಿಲ್ಲೆಯ ಶಿಕ್ಷಣ ಹಾಗೂ ಕಂದಾಯ ಇಲಾಖೆಯ ನೌಕರರು ಅಭಿನಯಿಸಿದ್ದಾರೆ.
ಪ್ರಶಸ್ತಿಗಳ ಪಟ್ಟಿ
- ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ – ಹಾಸನ ತಂಡ
- ಉತ್ತಮ ನಿರ್ದೇಶನಕ್ಕೆ ಜಯಶಂಕರ ಬೆಳಗುಂಬ – ಪ್ರಥಮ ಬಹುಮಾನ
- ಪೋಷಕ ನಟ ವಿಭಾಗದಲ್ಲಿ ಕತ್ತಿ ಮಲ್ಲೇನಹಳ್ಳಿ ಪರಮೇಶ್ – ತೃತೀಯ ಸ್ಥಾನ
ತಂಡದ ಸದಸ್ಯರು
ಕತ್ತಿ ಮಲ್ಲೇನಹಳ್ಳಿ, ಲಕ್ಷಣ್ ಟಿ.ಎಸ್, ವೀಣಾ ಎಂ, ಶ್ವೇತಾ ಬಿ.ಬಿ, ಮಧುಕುಮಾರಿ, ರೂಪ, ಚಂದ್ರಕಲಾ, ಭಾರತಿ ಸಿ.ಡಿ, ನಗ್ಮಾ, ರೂಪ, ಲೋಕೇಶ್, ಮಂಜುನಾಥ್, ಶಿವರಾಂ, ನವೀನ್ ಕುಮಾರ್ ಸೇರಿದಂತೆ ಹಲವರು ತಂಡದಲ್ಲಿದ್ದರು.

ಜಿಲ್ಲೆಯ ಹೆಮ್ಮೆ
ಹಾಸನ ಜಿಲ್ಲೆಯ ಸರ್ಕಾರಿ ನೌಕರರ ತಂಡವು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವುದು ಜಿಲ್ಲೆಗೆ ಹೆಮ್ಮೆ ತಂದುಕೊಟ್ಟಿದ್ದು, ವಿವಿಧ ವಲಯಗಳಿಂದ ಅಭಿನಂದನೆಗಳು ವ್ಯಕ್ತವಾಗಿವೆ.










