14.6 C
Munich
Home News ಸಕಲೇಶಪುರ ಪುರಸಭಾ ಸದಸ್ಯ ಮುಕೇಶ್ ಶೆಟ್ಟಿ – ನಗರಾಭಿವೃದ್ಧಿ ಪ್ರಾಧಿಕಾರದ ಮೊದಲ ಸದಸ್ಯ

ಸಕಲೇಶಪುರ ಪುರಸಭಾ ಸದಸ್ಯ ಮುಕೇಶ್ ಶೆಟ್ಟಿ – ನಗರಾಭಿವೃದ್ಧಿ ಪ್ರಾಧಿಕಾರದ ಮೊದಲ ಸದಸ್ಯ

Municipal council member Mukesh Shetty was elected by a majority vote by the municipality as the first member of the Sakleshpur Urban Development Authority.

ಸಕಲೇಶಪುರ:ಸಕಲೇಶಪುರ ನಗರಾಭಿವೃದ್ಧಿ ಪ್ರಾಧಿಕಾರದ ಮೊದಲ ಸದಸ್ಯರಾಗಿ ಪುರಸಭಾ ಸದಸ್ಯ ಮುಕೇಶ್ ಶೆಟ್ಟಿ ಅವರನ್ನು ಪುರಸಭೆಯ ವತಿಯಿಂದ ಬಹುಮತದಿಂದ ಆಯ್ಕೆ ಮಾಡಲಾಯಿತು.

ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜಕುಮಾರ್ ಅವರು, ಸಕಲೇಶಪುರದ ನಗರಾಭಿವೃದ್ಧಿಗೆ ಆಯ್ಕೆಯಾಗಿರುವ ಮುಕೇಶ್ ಶೆಟ್ಟರು ತಮ್ಮ ಅವಧಿಯಲ್ಲಿ ಪುರಸಭೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ನಗರಾಭಿವೃದ್ಧಿಯಲ್ಲಿ ಜನ ಮೆಚ್ಚುವಂತ ಕೆಲಸ ಮಾಡಲಿ ಎಂದು ಆಶಿಸಿದರು.

ಮುಕೇಶ್ ಶೆಟ್ಟಿ ಮಾತನಾಡಿ, ತಾಲೂಕಿನ ಸಕಲೇಶಪುರ ನಗರಾಭಿವೃದ್ಧಿ ಪ್ರಾಧಿಕಾರದ ಮೊದಲ ಸದಸ್ಯನಾಗಿ ಆಯ್ಕೆ ಮಾಡಿರುವ ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನಗಿರುವ ಅಲ್ಪಾವಧಿಯಲ್ಲಿ ಸಕಲೇಶಪುರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮತ್ತು ಪುರಸಭೆಯನ್ನು ರಾಜ್ಯಕ್ಕೆ ಮಾದರಿಯನ್ನಾಗಿಸುವ ದಿಶೆಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ಝರಿನ, ಪುರಸಭಾ ಮಾಜಿ ಅಧ್ಯಕ್ಷರಾದ ಯಾದ್ಗಾರ್, ಇಬ್ರಾಹಿಂ, ಆದರ್ಶ್, ಕಾಡಪ್ಪ, ಎಲ್ಲಾ ಸದಸ್ಯರು ಹಾಗೂ ಮುಖ್ಯಾಧಿಕಾರಿ ಮಹೇಶ್ವರಪ್ಪ ಉಪಸ್ಥಿತರಿದ್ದರು.

error: Content is protected !!