1.4 C
Munich
Home News ಹೊಳೆನರಸೀಪುರ: ವಿಶ್ವಕರ್ಮ ದಿನಾಚರಣೆ: ವಿಶ್ವಕರ್ಮ ಸಮಾಜಕ್ಕೆ ವಿಶೇಷ ಸ್ಥಾನಮಾನ – ಸಂಸದ ಶ್ರೇಯಸ್ ಪಟೇಲ್ ಭರವಸೆ

ಹೊಳೆನರಸೀಪುರ: ವಿಶ್ವಕರ್ಮ ದಿನಾಚರಣೆ: ವಿಶ್ವಕರ್ಮ ಸಮಾಜಕ್ಕೆ ವಿಶೇಷ ಸ್ಥಾನಮಾನ – ಸಂಸದ ಶ್ರೇಯಸ್ ಪಟೇಲ್ ಭರವಸೆ

MP Shreyas Patel participated in the Sri Vishwakarma Day celebrations organized by the National Festivals Celebration Committee and the Taluk Vishwakarma Samaj at the town's Maha Ganapati Pandal.

ಹೊಳೆನರಸೀಪುರ: ಪಟ್ಟಣದ ಮಹಾ ಗಣಪತಿ ಪೆಂಡಾಲ್ ನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ವಿಶ್ವಕರ್ಮ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ದಿನಾಚರಣೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಶ್ರೇಯಸ್, ನಮ್ಮ ಜಿಲ್ಲೆ, ನಾಡು, ದೇಶಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿ. ಅದರಲ್ಲೂ ಶಿಲ್ಪಕಲೆಗೆ ಈ ಸಮುದಾಯದವರ ಕೊಡುಗೆ ಅತ್ಯಮೂಲ್ಯ ಎಂಬುದನ್ನು ನಾವ್ಯಾರೂ ಮರೆಯಲು ಸಾಧ್ಯವಿಲ್ಲ ಎಂದರು. ವಿಶ್ವಕರ್ಮ ಸಮುದಾಯಕ್ಕೆ ವಿಶೇಷ ಸ್ಥಾನಮಾನ, ಸವಲತ್ತು, ಅಧಿಕಾರ ದೊರಗಿಸಿಕೊಡಲು ತಮ್ಮ ಅವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ,ಮಾಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಅರಕಲಗೂಡು ಅರೆ ಮಾದನಹಳ್ಳಿ ಮಠದ ಶ್ರೀಗಳು, ಜಿಲ್ಲೆಯ ಯುವ ಸಂಸದರನ್ನು ಸನ್ಮಾನಿಸಿ ಅಭಿನಂದಿಸಿದರು.

ಇದೇ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಹಾಸನ ಜಿಲ್ಲೆಯ ಹೆಮ್ಮೆ, ಕಾದಂಬರಿ ಲೋಕದ ದಿಗ್ಗಜ ದಿ.ಡಾ. ಎಸ್.ಎಲ್. ಬೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಹರೀಶ್ ಮೊದಲಾದವರು ಹಾಜರಿದ್ದರು.

error: Content is protected !!