4.2 C
Munich
Home News ಅರಕಲಗೂಡು:ಅಂಗವಿಕಲರಿಗೆ ಉಚಿತ ಸಲಕರಣೆ ವಿತರಣೆ – ಸಮಾಜ ಮುಖ್ಯವಾಹಿನಿಗೆ ಬರಲು ಕಿವಿಮಾತು

ಅರಕಲಗೂಡು:ಅಂಗವಿಕಲರಿಗೆ ಉಚಿತ ಸಲಕರಣೆ ವಿತರಣೆ – ಸಮಾಜ ಮುಖ್ಯವಾಹಿನಿಗೆ ಬರಲು ಕಿವಿಮಾತು

MLA A. Manju Kiwimatu said that people with disabilities should try to enter the mainstream of society.

ಅರಕಲಗೂಡು: ಅಂಗವಿಕಲರು ಸಮಾಜ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಶಾಸಕ ಎ. ಮಂಜು ಕಿವಿಮಾತು ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ ಅಲಿಂ ಕೋ ಸಂಸ್ಥೆ ವತಿಯಿಂದ ಉಚಿತವಾಗಿ ಅಂಗವಿಕಲರಿಗೆ ಇತ್ತೀಚಿಗೆ ಉಪಯುಕ್ತ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು, ಸಿಎಸ್‌ಆರ್ ಅನುದಾನದಲ್ಲಿ ಸಂಸ್ಥೆಯು ಈ ಸೌಲಭ್ಯಗಳನ್ನು ಪ್ರತಿ ಹಳ್ಳಿಗಳಲ್ಲಿರುವ ಅಂಗವಿಕಲರಿಗೆ ಒದಗಿಸುತ್ತಿದೆ.

ಇವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿಯೂ ಸಂಸ್ಥೆ ಇದೇ ರೀತಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು. ತಾಪಂ ಇಒ ಶ್ರೀನಿವಾಸ್, ಅಲೀಂ ಕೋ ಸಂಸ್ಥೆಯ ವ್ಯವಸ್ಥಾಪಕ ಅಭಿಷೇಕ್ ಶರ್ಮಾ ಇತರರಿದ್ದರು.

error: Content is protected !!