ನವದೆಹಲಿ: ಕೇಂದ್ರ ಸರ್ಕಾರದ ಸಂವಹನ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧ್ಯಾ ಅವರನ್ನು ಭೇಟಿಯಾಗಿ, ಹಾಸನ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ಮಂಡಿಸಿದೆ.
ಹಾಸನ ಅಂಚೆ ವಿಭಾಗದಲ್ಲಿ 17 ಖಾಲಿ ಜಾಗಗಳು ಲಭ್ಯವಿದ್ದರೂ ಅನೇಕ ಅಂಚೆ ಕಚೇರಿಗಳು ಇನ್ನೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕು ಕೇಂದ್ರವಾದ ಆಲೂರಿನಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ ಸೇರಿದಂತೆ, ಹಾಸನ (ಎನ್.ಆರ್.ಬಡಾವಣೆ), ಹರಳಹಳ್ಳಿ, ಬಾಗೂರು, ಗೊರೂರು, ರಾಮನಾಥಪುರ, ನುಗ್ಗೇಹಳ್ಳಿ, ಶಾಂತಿಗ್ರಾಮ, ಕಂದಲಿ, ದುದ್ದ, ಯಸಳೂರು, ಬಿಕ್ಕೋಡು, ಪಾಳ್ಯ, ಹಾನುಬಾಳು, ಹಗರೆ ಹಾಗೂ ಕೆ.ಹೊಸಕೋಟೆಗಳಲ್ಲಿ ಸಬ್ ಪೋಸ್ಟ್ ಕಚೇರಿ ಕಟ್ಟಡಗಳಿಗೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದರು.
ಇದೇ ವೇಳೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಮಾನವ–ಕಾಡಾನೆ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರ ಸುರಕ್ಷತೆಗೆ ಅಗತ್ಯವಾದ ಮೊಬೈಲ್ ನೆಟ್ವರ್ಕ್ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು.
ಸಾರ್ವಜನಿಕ ಸುರಕ್ಷತೆ ಮತ್ತು ಪರಿಣಾಮಕಾರಿ ಆಡಳಿತದ ದೃಷ್ಟಿಯಿಂದ 4G ಸ್ಯಾಚುರೇಷನ್ ಯೋಜನೆಯಡಿ ಮೊಬೈಲ್ ದೂರಸಂಪರ್ಕ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿದ್ದು, ಬೇಲೂರು ತಾಲ್ಲೂಕಿನ ದೊಡ್ಡಸಾಲಾವರ, ಹೊಳಲು, ಬ್ಯಾದನೆ, ಕನಹಳ್ಳಿ, ನೆರ್ಲಮಕ್ಕಿ, ಅಂಕಿಹಳ್ಳಿ, ಸಕಲೇಶಪುರ ತಾಲ್ಲೂಕಿನ ಈಚಲಬೀಡು, ಹಿರಿದನಹಳ್ಳಿ ಹಾಗೂ ಆಲೂರು ತಾಲ್ಲೂಕಿನ ಮಾದಿಹಳ್ಳಿ ಮತ್ತು ಹರಿಹಳ್ಳಿಯಲ್ಲಿ ಮೊಬೈಲ್ ಟವರ್ ಅಳವಡಿಸುವಂತೆ ಮನವಿ ಮಾಡಿದರು.
Met Union Minister for Communications Shri Jyotiraditya M. Scindia and presented important ideas related to the development of Hassan Lok Sabha constituency.










