ಬೆಂಗಳೂರು: ಸಿಎಂ ಕುರ್ಚಿ ಗುದ್ದಾಟದ ನಡುವೆ ಡಿಕೆ ಶಿವಕುಮಾರ್ ಭೇಟಿ ಮಾಡಿದ ಕೆ.ಎನ್. ರಾಜಣ್ಣ – ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ

Just as the 'CM chair fight' is rampant in state politics, Sidhu's close aide K.N. Rajanna's meeting with Deputy Chief Minister DK Shivakumar has created quite a stir.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ‘ಸಿಎಂ ಕುರ್ಚಿ ಗುದ್ದಾಟ’ ಜೋರಾಗಿರುವಂತೆಯೇ, ಸಿದ್ದು ಅತ್ಯಾಪ್ತ ಕೆ.ಎನ್. ರಾಜಣ್ಣ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಚರ್ಚೆ ಶುರುವಾದ ಆರಂಭದಿಂದಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ ಎಂದು ಬ್ಯಾಟ್ ಬೀಸುತ್ತಿರುವ ರಾಜಣ್ಣ, ಇದಕ್ಕಿದ್ದಂತೆ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಇತ್ತೀಚಿಗೆ ದಲಿತ ಸಿಎಂ ಪರ ಧ್ವನಿ ಎತ್ತಿದ್ದ ರಾಜಣ್ಣ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಈಗ ಇದ್ದಕ್ಕಿದ್ದಂತೆ ಡಿಕೆ ಶಿವಕುಮಾರ್ ಅವರನ್ನು

ಬೆಂಗಳೂರಿನ ಖಾಸಗಿ ಅತಿಥಿ ಗೃಹದಲ್ಲಿ ಭೇಟಿಯಾಗಿದ್ದು, ಉಭಯ ನಾಯಕರ ನಡುವಿನ ಚರ್ಚೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Just as the ‘CM chair fight’ is rampant in state politics, Sidhu’s close aide K.N. Rajanna’s meeting with Deputy Chief Minister DK Shivakumar has created quite a stir.