ಹಾಸನ: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಬೀಗ ಮುರಿದು ಒಳನುಗ್ಗಿರುವ ಕಳ್ಳರು ಅಂದಾಜು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಶಾಂತಿನಗರದಲ್ಲಿ ಬೆಳಕಿಗೆ ಬಂದಿದೆ.
ಶಾಂತಿನಗರ 4ನೇ ಅಡ್ಡರಸ್ತೆಯ ಶಿವಕುಮಾರ ಸ್ವಾಮೀಜಿ ರಸ್ತೆಯಲ್ಲಿರುವ ಕುಮಾರಸ್ವಾಮಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.
ಕುಟುಂಬ ಸದಸ್ಯರು ಡಿ. 31 ರಂದು ಬೆಂಗಳೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಸೋಮವಾರ ಸಂಜೆ ವಾಪಾಸ್ ಬಂದಾಗ ಮನೆ ಬಾಗಿಲು ಮುರಿದಿರುವುದು ಗೊತ್ತಾಗಿದೆ.
ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು, ಶ್ವಾನ ದಳ, ಬೆರಳಚ್ಚುಗಾರರೊಂದಿಗೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು.
ಬೀರುವಿನಲ್ಲಿಟ್ಟಿದ್ದ ಚಿನ್ನದ ಸರ, ಲಕ್ಷ್ಮೀ ಡಾಲರ್, ನೆಕ್ಲೆಸ್, ಎರಡು ಹರಳಿನ ಉಂಗುರ, ಚಿನ್ನದ ಓಲೆ, ಜುಮುಕಿ ಸೇರಿ ಮತ್ತಿತರ ಚಿನ್ನಾಭರಣ ಕಳುವಾಗಿವೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
incident has come to light in Shantinagar where thieves broke into a house after making sure no one was home and stole gold jewellery worth an estimated Rs 15 lakh.










