ಅರಸೀಕೆರೆ: “ಮಂತ್ರಿಸ್ಥಾನಕ್ಕೂ ದುಂಬಾಲು, ನಿಗಮ ಮಂಡಳಿಯೂ ನಿಮ್ಮದೇ—ಅಹಿಂದ ಕಾಳಜಿ ನಾಟಕವೇ?”: ಅರಸೀಕೆರೆಯ ಶಾಸಕರ ವಿರುದ್ಧ ಕೆಂಕೆರೆ ಕೇಶವಮೂರ್ತಿ ವಾಗ್ದಾಳಿ

In the KEB meeting held by the MLAs recently, he said that he joined the Congress only to become a minister. He questioned whether it was selfish to want a ministerial position for himself.

ಅರಸೀಕೆರೆ: ನಾನು ಸ್ವಾರ್ಥ ರಾಜಕಾರಣಿಯಲ್ಲ, ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿ ಎಂದು ಬಡಾಯಿ ಕೊಚ್ಚಿಕೊಳ್ಳುವ ಸ್ಥಳೀಯ ಶಾಸಕರ ನಿಜ ಬಣ್ಣ ಕಡೆಗೂ ಬಯಲಾಗಿದೆ ಎಂದು ಸ್ಥಳೀಯ ಜೆಡಿಎಸ್ ಮುಖಂಡ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಕೇಶವಮೂರ್ತಿ ಟೀಕಾ ಪ್ರಹಾರ ನಡೆಸಿದ್ದಾರೆ.

ಮೊನ್ನೆ ಶಾಸಕರೇ ನಡೆಸಿದ ಕೆಇಬಿ ಸಭೆಯಲ್ಲಿ ನಾನು ಮಂತ್ರಿಯಾಗುವುದಕ್ಕಾಗಿಯೇ ಕಾಂಗ್ರೆಸ್‌ಗೆ ಹೋಗಿರುವುದು ಎಂದಿದ್ದಾರೆ. ತನಗೇ ಮಂತ್ರಿಸ್ಥಾನ ಸಿಗಬೇಕು ಎಂಬುದು ಸ್ವಾರ್ಥ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕುರುಬ ಸಮುದಾಯಕ್ಕೆ ಸೇರಿದ ಬಿಳಿ ಚೌಡಯ್ಯ ಅವರನ್ನು ಎಂಎಲ್‌ಸಿ ಮಾಡಲಿಲ್ಲ ಎಂಬ ಕಾರಣಕ್ಕೆ ನಾನು ಜೆಡಿಎಸ್ ತೊರೆದೆ ಎನ್ನುವ ಶಿವಲಿಂಗೇಗೌಡರಿಗೆ ಈಗ ಬಿಳಿಚೌಡಯ್ಯ ಅವರು
ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಬಿಳಿಚೌಡಯ್ಯ ಅವರ ಮೇಲೆ ಅಭಿಮಾನ, ಪ್ರೀತಿ, ಹಿಂದುಳಿದ ವರ್ಗಗಳ ಮೇಲೆ ಕಾಳಜಿ ಇದ್ದಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ಎಂಎಲ್‌ಸಿ ಮಾಡಿಸಬಹುದಿತ್ತು.
ಅದೂ ಬೇಡ, ಕಳೆದ ಎರಡು ವರ್ಷಗಳಿಂದ ತಾವೇ ಅಧ್ಯಕ್ಷರಾಗಿರುವ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನು ಬಿಳಿಚೌಡಯ್ಯ ಅವರಿಗೆ ಬಿಟ್ಟು ಕೊಡಬಹುದಿತ್ತು ಅಲ್ಲವೇ?
ಈ ಬಗ್ಗೆ ಕೇಳಿದರೆ ಶಾಸಕರಿಗಷ್ಟೇ ನಿಗಮ ಮಂಡಳಿ ನೀಡಿರುವುದು ಎನ್ನುವ ನೀವು ನಿನ್ನೆಯಲ್ಲೇ 2ನೇ ಅವಧಿಯಲ್ಲಿ ನೀವೂ ಸೇರಿದಂತೆ 25 ಶಾಸಕರ ನಿಗಮ ಮಂಡಳಿ ಅಧಿಕಾರಾವಧಿಯನ್ನು ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈಗಲಾದಲೂ ನೀವು ನನಗೆ ಬೇಡ, ಬಿಳಿಚೌಡಯ್ಯ ಅವರಿಗೆ ಕೊಡಿ ಎಂದು ಹೇಳಬಹುದಿತ್ತು, ಏಕೆ ಹೇಳಲಿಲ್ಲ ಎಂದು ಕೇಳಿದ್ದಾರೆ. ನೀವೇ ದುಂಬಾಲು ಬಿದ್ದು ಕೇಳಿ ಕೊಂಡಿದ್ದರ ಪರಿಣಾಮ 25 ಶಾಸಕ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಮುಂದುವರಿಸಲಾಗಿದೆ ಎಂದು ಲೇವಡಿ ಮಾಡಿದ್ದಾರೆ.

ನಿಗಮ ಮಂಡಳಿಯೂ ನಿಮಗೇ ಬೇಕು, ಮಂತ್ರಿಯೂ ನೀವೇ ಆಗಬೇಕು ಎಂದು ಸ್ವಾರ್ಥವನ್ನೇ ಮೈದುಂಬಿಕೊಂಡಿರುವ ನಿಮಗೆ, ಹಿಂದುಳಿದ ಮುಖಂಡರು, ವರ್ಗಗಳ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿ ಉಳಿದಿದೆ ಎಂದಿದ್ದಾರೆ.

ಒಳಗೊಂದು, ಹೊರಗೊಂದು ಮನಸ್ಥಿತಿಯ, ಮುಖವಾಡದ ನಿಮಗೆ ಕ್ಷೇತ್ರದ ಜನರು ನಿಮಗೆ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಸಕರು ಮನದೊಳಗೆ ಎಷ್ಟೊಂದು ದ್ವೇಷಾಸೂಯೆ ತುಂಬಿಕೊಂಡಿದ್ದಾರೆ ಎಂದರೆ ಕೆಲ ದಿನಗಳ ಹಿಂದೆ ಶಾಲಾ ಉದ್ಘಾಟನೆಗಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಅರಸೀಕೆರೆ ತಾಲೂಕಿನ ಕೆಂಕೆರೆ ಗ್ರಾಮಕ್ಕೆ ಬರಬೇಕಿತ್ತು. ಇದಕ್ಕಾಗಿ ಎಲ್ಲ ಸಿದ್ಧತೆ ನಡೆದಿತ್ತು. ಸಚಿವರೂ ಒಪ್ಪಿಕೊಂಡಿದ್ದರು. ಆದರೆ ನನ್ನ ಅನುಮತಿ ಇಲ್ಲದೆ ಕ್ಷೇತ್ರಕ್ಕೆ ಬರಕೂಡದು ಎಂದು ಸಚಿವರನ್ನು ದುರುದ್ದೇಶದಿಂದ ತಡೆದಿದ್ದೀರಿ. ಇದು ಕೆಂಕೆರೆ ಗ್ರಾಮಸ್ಥರಿಗೆ ಮಾಡಿರುವ ಅವಮಾನ, ಇದರ ಪ್ರಾಯಶ್ಚಿತ್ತವನ್ನು ನೀವು ಮುಂದೆ ಅನುಭವಿಸುತ್ತೀರಿ ಎಂದು ಎಚ್ಚರಿಸಿದ್ದಾರೆ.

ಹಿಂದೆಯೂ ಕೂಡ ನೀವು ಜೆಡಿಎಸ್‌ನಲ್ಲಿದ್ದಾಗ ತಮ್ಮ ಹೊರತಾಗಿ ಮುಖಂಡರು, ಕಾರ್ಯಕರ್ತರನ್ನು ಹೆಚ್.ಡಿ.ದೇವೇಗೌಡರು, ಹೆಚ್.ಡಿ.ರೇವಣ್ಣ ಮೊದಲಾದ ನಾಯಕರ ಭೇಟಿಗೆ ಬಿಡುತ್ತಿರಲಿಲ್ಲ.

ಕಾಂಗ್ರೆಸ್‌ನಲ್ಲೂ ಅದೇ ಚಾಳಿ ಮುಂದುವರಿಸಿದ್ದೀರಿ. ಇನ್ನಾದರೂ ಅರಸೀಕೆರೆ ಕ್ಷೇತ್ರದ ಜನರು ಶಿವಲಿಂಗೇಗೌಡರ ಅಹಿಂದ ನಾಟಕ ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ಕೇಶವಮೂರ್ತಿ ಮನವಿ ಮಾಡಿದ್ದಾರೆ.

In the KEB meeting held by the MLAs recently, he said that he joined the Congress only to become a minister. He questioned whether it was selfish to want a ministerial position for himself.