ಅರಕಲಗೂಡು :ತಾಲೂಕು ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

In the elections held on Sunday, T. Vijayakumar and P. Shivakumar, who contested for the post of President, received equal votes, and P. Shivakumar was elected through a lottery.

ಅರಕಲಗೂಡು: ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿ.‌ ಶಿವಕುಮಾರ್ ಆಯ್ಕೆಯಾದರು. ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಟಿ. ವಿಜಯಕುಮಾರ್ ಮತ್ತು ಪಿ. ಶಿವಕುಮಾರ್ ಅವರಿಗೆ ಸಮ ಪ್ರಮಾಣದಲ್ಲಿ ಮತಗಳು ಚಲಾವಣೆಯಾದ ಹಿನ್ನಲೆಯಲ್ಲಿ ಲಾಟರಿ ಮೂಲಕ ಪಿ. ಶಿವಕುಮಾರ್ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ದೇವಕಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಶೆಟ್ಟಿ, ಕಾರ್ಯದರ್ಶಿ ಕೆ.ವಿ. ಸತೀಶ್, ಖಜಾಂಚಿಯಾಗಿ ರವಿ ಬೆಟ್ಟಸೋಗೆ ಹಾಗೂ ನಿರ್ದೇಶಕರಾಗಿ ಸಂತೋಷಗೌಡ, ಡಿ.ಎನ್. ರಾಜೇಂದ್ರ ಕುಮಾರ್, ಎಂ.ಬಿ. ಸಾಹಸ್,ಬಿ.ಎ. ರಘು, ಕೆ. ಆರ್. ಶ್ರೀನಿವಾಸ್, ಬಿ.ಸಿ. ಜಯಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಕುಶ್ವಂತ್, ಸಹಾಯಕ ಚುನಾವಣಾಧಿಕಾರಿಯಾಗಿ ಶರತ್ ಕಾರ್ಯ ನಿರ್ವಹಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕ ಪಿ.ಬಿ. ವಿರೂಪಾಕ್ಷ ಇದ್ದರು.

In the elections held on Sunday, T. Vijayakumar and P. Shivakumar, who contested for the post of President, received equal votes, and P. Shivakumar was elected through a lottery.