20.1 C
Munich
Home News Politics ನಾನು ಒಂದು ದಿನವೂ ಕ್ಷೇತ್ರದಿಂದ ಹೊರಗೆ ಹೋದವನಲ್ಲ, ದೇವರು, ಜನರ ಆಶೀರ್ವಾದ ಇದ್ದರೆ ಮತ್ತೊಮ್ಮೆ ಗೆದ್ದು...

ನಾನು ಒಂದು ದಿನವೂ ಕ್ಷೇತ್ರದಿಂದ ಹೊರಗೆ ಹೋದವನಲ್ಲ, ದೇವರು, ಜನರ ಆಶೀರ್ವಾದ ಇದ್ದರೆ ಮತ್ತೊಮ್ಮೆ ಗೆದ್ದು ಬರ್ತೀನಿ; ಪ್ರಜ್ವಲ್ ರೇವಣ್ಣ

ನಾವು ಮಾಡಿರುವ ಕೆಲಸ, ನಾವು ತಂದಿರುವ ಯೋಜನೆಗಳು ನಮ್ಮ ಕೈ ಹಿಡಿಯುತ್ತೆ.

ಹಾಸನ: ನಾನು ಒಂದು ದಿನವೂ ಕ್ಷೇತ್ರದಿಂದ ಹೊರಗೆ ಹೋದವನಲ್ಲ, ಜಿಲ್ಲೆಯ ನೊಂದ ಜನರಿಗೆ ನ್ಯಾಯ ಒದಗಿಸಿದ್ದೇನೆ. ಜನರು ನನಗೆ ಮತ್ತೊಮ್ಮೆ ಅವಕಾಶ ಕೊಡಬೇಕು ಎಂದು ಮಾತನಾಡುತ್ತಿದ್ದಾರೆ ಎಂದು ಸಂಸದ ಪ್ರಜ್ವಲ್‌ರೇವಣ್ಣ ಹೇಳಿದರು.

ನಾನು ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ, ನೀವು ಗೆಲ್ತಿರಾ ಅಂತ ಜನರು ಹೇಳ್ತಿದ್ದಾರೆ. ಐದು ವರ್ಷದಲ್ಲಿ ಹನ್ನೆರಡೂವರೆ ಸಾವಿರ ಕೋಟಿ ರೂ. ಕೇಂದ್ರದಿಂದ ಅನುದಾನ ತಂದಿದ್ದೇನೆ ಎಂದರು.

ಅದಕ್ಕೆ ನರೇಂದ್ರಮೋದಿ, ಎಚ್.ಡಿ.ದೇವೇಗೌಡರು ಸೇರಿದಂತೆ ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಅವರ ಆಶೀರ್ವಾದದ ಮೇಲೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಎಂದರು.

ದೇವರು, ಜನರ ಆಶೀರ್ವಾದ ಇದ್ದರೆ ಮತ್ತೊಮ್ಮೆ ಗೆದ್ದು ಬರ್ತಿನಿ. ಬಿಜೆಪಿ ಜತೆ ಹೊಂದಾಣಿಕೆ ನೂರಕ್ಕೆ ನೂರು ಅನುಕೂಲವಾಗುತ್ತೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ಬಹಳಷ್ಟು ಜನ ನನ್ನ ಟಚ್‌ನಲ್ಲಿ ಇದ್ದಾರೆ‌ ಎಂದರು.

ಜೆಡಿಎಸ್ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಹೋಗುವ ಕೆಲಸ ಮಾಡುತ್ತಿದ್ದೇವೆ. ಎಲ್ಲರದ್ದೂ ನಾವು ಕಾಂಗ್ರೆಸ್‌ನ ತಿರಸ್ಕಾರ ಮಾಡಬೇಕು ಎಂಬ ಒಂದೇ ಉದ್ದೇಶವಾಗಿದೆ ಎಂದು ಹೇಳಿದರು.

ನರೇಂದ್ರಮೋದಿ ಅವರಿಗೆ ಮತ್ತೊಂದು ಬಾರಿ ಶಕ್ತಿ ಕೊಡುವ ಕೆಲಸ ಮಾಡಬೇಕು., ರಾಷ್ಟ್ರದ ಅಭಿವೃದ್ಧಿ, ದೇಶ ಕಟ್ಟಲು ಎಲ್ಲರೂ ಒಂದಾಗಿದ್ದೇವೆ. ಬಿಜೆಪಿ ಮುಖಂಡರು ಸಲಹೆ ಕೊಡುತ್ತಿದ್ದಾರೆ ಎಂದರು.

ಜೆಡಿಎಸ್ ಮುಖಂಡರು ಬಿಜೆಪಿ ಮುಖಂಡರ ಜತೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅನುಕೂಲ ಆಗುತ್ತೆ, ಖಂಡಿತವಾಗಿಯೂ ಒಳ್ಳೆಯದಾಗುತ್ತೆ ಎಂದರು.

ನಾವು ಮಾಡಿರುವ ಕೆಲಸ, ನಾವು ತಂದಿರುವ ಯೋಜನೆಗಳು ನಮ್ಮ ಕೈ ಹಿಡಿಯುತ್ತೆ. ಈ ಜಿಲ್ಲೆಯ ಜನ ಹೋದ ಚುನಾವಣೆಯಲ್ಲಿ ಆಶೀರ್ವಾದ ಮಾಡಿದ್ರು ಅದಕ್ಕೆ ತಕ್ಕಂತೆ ದುಡಿಮೆ ಮಾಡಿದ್ದೇನೆ

ನನಗೆ ಮತ್ತೊಂದು ಅವಕಾಶ ಕೊಟ್ಟರೆ ಇನ್ನೂ ಹೆಚ್ಚಿನ ಕೆಲಸವನ್ನು ನಮ್ಮ ಜಿಲ್ಲೆಗೆ, ಜಿಲ್ಲೆಗೆ ಮಾಡ್ತಿನಿ‌ ಎಂದು ಭರವಸೆ ನೀಡಿದರು.

ನಾನು ಮಾಡಿರುವ ಕೆಲಸ, ತಂದಿರುವ ಅನುದಾನದ ಮಾಹಿತಿಯನ್ನು ಪುಸ್ತಕದ ಮೂಲಕ ಇಡೀ ಜಿಲ್ಲೆಯ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ದೊಡ್ಡವರು ಕೂಡ ಆರೋಗ್ಯವಾಗಿದ್ದಾರೆ ಏನೂ ತೊಂದರೆಯಿಲ್ಲ, ಅವರೊಂದಿಗೆ ನಾನು ನಿನ್ನೆ, ಇಂದು ಬೆಳಗ್ಗೆ ಮಾತನಾಡಿದೆ, ಸ್ವಲ್ಪ ಕೆಮ್ಮು ಇತ್ತು ಅಂದರು. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗ್ತಾರೆ. ಅವರ ದಿನಾಂಕ ತಗೊಂಡು ನನ್ನ ಸಾಧನೆಯ ಮಾಹಿತಿ ಪುಸ್ತಕವನ್ನು ಅವರಿಂದಲೇ ಬಿಡುಗಡೆ ಮಾಡಿಸುತ್ತೇನೆ‌ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿಕೆ ಬಗ್ಗೆ ಚರ್ಚೆ ಮಾಡಲ್ಲ, ಅದು ಅವರ ಪಕ್ಷದ ವಿಚಾರ, ಅವರು ಕುಳಿತುಕೊಂಡು ಸರಿ ಮಾಡುವ ಕೆಲಸ ಮಾಡ್ತಾರೆ. ನಮ್ಮ ಪಕ್ಷದಲ್ಲಿ ಯಾರಾದರೂ ಧ್ವನಿ ಎತ್ತಿದರೆ ಕುಮಾರಣ್ಣ ಮಾತಾಡ್ತಾರೆ. ಅವರ ಪಕ್ಷದವರು ಅದರ ಬಗ್ಗೆ ಚರ್ಚೆ ಮಾಡಬೇಕು‌ ಎಂದರು.

ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದೆ ಗೆಲ್ಲುತ್ತೆ ಎನ್ನುವ ಭಾವನೆ ದೆಹಲಿಯಲ್ಲೂ ಇದೆ.
ಹಾಗಾಗಿ ಎಲ್ಲರೂ ಒಟ್ಟಿಗೆ ಹೋಗುವಂತಹ ಕೆಲಸವನ್ನು ನಾವು ಮಾಡ್ತಿವಿ. ಮುಂದಿನ ದಿನಗಳಲ್ಲಿ ಅವೆಲ್ಲವನ್ನೂ ಬಗೆಹರಿಸುವಂತೆ ಕೆಲಸವನ್ನು ಅವರ ಪಕ್ಷದಲ್ಲೂ ಮಾಡ್ತಾರೆ, ನಮ್ಮ ಪಕ್ಷದಲ್ಲೂ ಮಾಡ್ತಾರೆ ಎನ್ನುವ ಭಾವನೆಯಿದೆ ಎಂದರು.

error: Content is protected !!