15.2 C
Munich
Home News ಹಾಸನ ಜಿಲ್ಲೆಗೆ ಶುಕ್ರವಾರ ಆರೆಂಜ್ ಅಲರ್ಟ್

ಹಾಸನ ಜಿಲ್ಲೆಗೆ ಶುಕ್ರವಾರ ಆರೆಂಜ್ ಅಲರ್ಟ್

ಹಾಸನ: ಭಾರತೀಯ ಹವಾಮಾನಇಲಾಖೆಯ ವರದಿಯಂತೆ ಹಾಸನ ಜಿಲ್ಲೆಗೆ ಜು.೧೮ ರಂದ ಆರೆಂಜ್ ಅಲರ್ಟ್ ಮುನ್ನೆಚ್ಚರಿಕೆ ನೀಡಿದ್ದು, ಜಿಲ್ಲೆಯ ಕೆಲವೊಂದು ಭಾಗಗಳಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ಸಾರ್ವಜನಿಕರುಅಗತ್ಯಎಚ್ಚರಿಕೆ ವಹಿಸಿ ಕೆರೆ-ಕಟ್ಟೆ ಹಾಗೂ ನದಿ ಪಾತ್ರಗಳ ಹತ್ತಿರ ಜನರು ಹೋಗದಿರಲು ಹಾಗೂ ಜಾನುವಾರುಗಳನ್ನು ಬಿಡದಿರಲುಕೋರಿದೆ.

ಜಿಲ್ಲೆಯಲ್ಲಿಗುಡ್ಡ ಕುಸಿತ ಪ್ರಕರಣಗಳು ಸಂಭವಿಸುವ ಸಾಧ್ಯ ಇರುವುದರಿಂದ ಹಾಗೂ ಜಿಲ್ಲೆಯಾದ್ಯಂತ ನದಿಗಳಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗುವುದರಿಂದ ನದಿಪಾತ್ರಗಳ ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ತಿಳಿಸಿದೆ. ಹಾಸನ ಜಿಲ್ಲಾ ವ್ಯಾಪ್ತಿಯಲಿ ್ಲಯಾವುದೇ ಅಹಿತಕರ ಘಟನೆಗಳು ಸಂಭವಿಸದಿರುವAತೆ ಸಹಕರಿಸಲುಕೋರಿದೆ.

ತುರ್ತು ಸಂದರ್ಭಗಳಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿ ದೂರವಾಣಿ ಸಂಖ್ಯೆ: ೦೮೧೭೨-೨೬೧೧೧೧ ಹಾಗೂ ಉಚಿತ ಸಹಾಯವಾಣಿ ೧೦೭೭ಗೆ ಕರೆ ಮಾಡಲು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ತಿಳಿಸಿದ್ದಾರೆ.

error: Content is protected !!