Hassan:ಹಾಸನ: ನಗರದ Scholars International School ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ, ಐಸಿಎಸ್‌ಇ (ICSE) ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯು ಸನ್ಮಾನಿಸಿತು. ಈ ಬಾರಿ ಶಾಲೆಯು ಶೇಕಡಾ 100ರಷ್ಟು ಫಲಿತಾಂಶ ದಾಖಲಿಸಿದ್ದು ಗಮನಾರ್ಹವಾಗಿದೆ.
ಕಾರ್ಯಕ್ರಮದ ವಿಶೇಷತೆ ಎಂದರೆ, ತಮ್ಮ ಸಾಧನೆಗೆ ಬೆನ್ನೆಲುಬಾಗಿದ್ದ ಪೋಷಕರನ್ನು ವಿದ್ಯಾರ್ಥಿಗಳೇ ಸನ್ಮಾನಿಸಿದ ಕ್ಷಣ. ಈ ಸಂದರ್ಭದಲ್ಲಿ ಪೋಷಕರ ಸಂತಸದ ಕಣ್ಣೀರ ಭಾಷ್ಪವು ಮಕ್ಕಳ ಯಶಸ್ಸಿನ ಹಿಂದೆ ಇರುವ ಶ್ರಮಕ್ಕೆ ಸಾಕ್ಷಿಯಾಯಿತು.
97% ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದ ಜನ್ಯ ವೈ.ಬಿ. ಅವರ ಪೋಷಕರು ಮಾತನಾಡಿ, ಮಕ್ಕಳ ಮೇಲೆ ಅನಗತ್ಯ ಒತ್ತಡ ನೀಡದೇ, ಅವರಿಗೆ ಸ್ವತಂತ್ರವಾಗಿ ಕಲಿಯುವ ವಾತಾವರಣ ಕಲ್ಪಿಸುವುದು ಮುಖ್ಯವೆಂದು ಅಭಿಪ್ರಾಯಪಟ್ಟರು.
96% ಅಂಕಗಳಿಸಿದ ಡೀವಿತ್ ಡೆವಿಡ್ ಅವರ ಪೋಷಕರು, ಈ ಯಶಸ್ಸಿಗೆ ಶಾಲೆಯ ಆಡಳಿತಾಧಿಕಾರಿ Dr. H. N. Chandrashekar ಹಾಗೂ ಶಿಕ್ಷಕ ವೃಂದದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಇದೇ ವೇಳೆ, 96% ಅಂಕಗಳಿಸಿದ ತನ್ವಿಕ್ ಅವರ ಪೋಷಕರು, ಶಾಲೆ ಹಾಗೂ ಪೋಷಕರ 13 ವರ್ಷದ ಸಂಯುಕ್ತ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ ಆಡಳಿತಾಧಿಕಾರಿ ಡಾ. ಎಚ್. ಎನ್. ಚಂದ್ರಶೇಖರ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, “ಈ ಸಾಧನೆ ನಿಮ್ಮ ಜೀವನದ ಮೊದಲ ಹೆಜ್ಜೆಯಷ್ಟೇ. ಮುಂದೆ ಇನ್ನಷ್ಟು ಸಾಧನೆಗಳನ್ನು ಗಳಿಸಿ ಯಶಸ್ಸಿನ ಮೆಟ್ಟಿಲುಗಳನ್ನು ಏರಬೇಕು” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರಾದ ಲಕ್ಷ್ಮೀನಾಗರಾಜು, ಕಾರ್ಯದರ್ಶಿ ಮಮತಾ ಚಂದ್ರಶೇಖರ್, ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Scholars International School in Hassan records 100% results. Students honor parents in a heart-touching ceremony celebrating ICSE and SSLC success.
Hassan, May 4: Scholars International School achieved a remarkable 100% result this year, with students excelling in ICSE and SSLC examinations.
The highlight of the event was a heart-touching moment where students honored their parents for their constant support and contribution to their success.
Parents of top scorer Janya Y.B. (97%) emphasized the importance of providing a stress-free learning environment.
Parents of Deevit David (96%) appreciated the efforts of school administrator Dr. H. N. Chandrashekar and teaching staff.
Parents of Tanvik (96%) expressed gratitude, stating that years of collaboration between school and parents led to this success.
Dr. H. N. Chandrashekar congratulated students and encouraged them to achieve greater milestones in life.
The event was attended by founder Lakshminagaraju, secretary Mamatha Chandrashekar, staff, parents, and students.










