ಹಾಸನ: ಈ ವರ್ಷ ಹಾಸನಾಂಬೆ ದೇವಾಲಯಕ್ಕೆ ಹರಿದುಬಂದ ಭಕ್ತರ ಸಂಖ್ಯೆಯು ತಿರುಪತಿ ತಿರುಮಲ ದರ್ಶನ ಪಡೆದವರಿಗಿಂತಲೂ ಹೆಚ್ಚು!
ಹೌದು, ಭಕ್ತರಿಗೆ ದರ್ಶನ ನೀಡುವ ವಿಷಯದಲ್ಲಿ ಹಾಸನಾಂಬ ದೇವಾಲಯ ತಿರುಪತಿಯನ್ನು ಹಿಂದಿಕ್ಕಿದೆ!
📅 ಅಕ್ಟೋಬರ್ 10ರಿಂದ 16ರವರೆಗೆ —
🔸 ತಿರುಪತಿ ಬಾಲಾಜಿ ದರ್ಶನ ಪಡೆದವರು: 5,31,945 ಮಂದಿ
🔸 ಹಾಸನಾಂಬೆ ದರ್ಶನ ಪಡೆದವರು: 13.89 ಲಕ್ಷ ಮಂದಿ!
ಗುರುವಾರ ಒಂದೇ ದಿನ 2.58 ಲಕ್ಷ ಭಕ್ತರು ತಾಯಿಯ ದರ್ಶನ ಪಡೆದರೆ, ಶುಕ್ರವಾರದಂದು ಈ ಸಂಖ್ಯೆ 3 ಲಕ್ಷ ದಾಟುವ ನಿರೀಕ್ಷೆ.
🕉️ ಅಶ್ವೀಜ ಮಾಸದ ಎರಡನೇ ಗುರುವಾರದಿಂದ ಬಲಿಪಾಡ್ಯಮಿ ಮರುದಿನವರೆಗೆ ಮಾತ್ರವೇ ಗರ್ಭಗುಡಿಯ ಬಾಗಿಲು ತೆರೆಯುವ ಪರಂಪರೆಯ ಹಿನ್ನಲೆಯಲ್ಲಿ,
ರಾಜ್ಯದ ಮೂಲೆ ಮೂಲೆಗಳಿಂದಲೇ ಅಲ್ಲದೆ ಹೊರರಾಜ್ಯ ಮತ್ತು ವಿದೇಶಗಳಿಂದಲೂ ಭಕ್ತರ ಪ್ರವಾಹ ಹರಿದುಬಂದಿದೆ.
ಭಕ್ತಿಯ ಉತ್ಸಾಹದ ಮಧ್ಯೆ, ಧರ್ಮದರ್ಶನ ಸಾಲುಗಳಲ್ಲಿ ಎಂಟು ಗಂಟೆಗೂ ಹೆಚ್ಚು ಕಾಲ ನಿಂತು ಬಳಲುತ್ತಿರುವ ಭಕ್ತರು — ಆದರೂ ತಾಯಿಯ ದರ್ಶನಕ್ಕಾಗಿ ತಾಳ್ಮೆಯಿಂದ ಕಾದು ನಿಂತಿರುವುದು ಭಕ್ತಿ ಶ್ರದ್ಧೆಯ ಅಪೂರ್ವ ನಿದರ್ಶನವಾಗಿದೆ.










