ಹಾಸನ: ಕೆ.ಎಸ್.ಆರ್.ಟಿ.ಸಿ. ಟಿಕೆಟ್ ತಪಾಸಣೆ ನಿರೀಕ್ಷಕ ಶಕುನಿಗೌಡ ತೊಟ್ಟ ಖಾಕಿ ಬಟ್ಟೆಯೇ ಅವರ ಪ್ರಾಣಕ್ಕೆ ಮುಳುವಾಗಿದ್ದು, ಅಕ್ರಮ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿ ಚಾಲಕ ಅವರನ್ನು ಪೊಲೀಸ್ ಎಂದು ತಿಳಿದು ಉದ್ದೇಶಪೂರ್ವಕವಾಗಿ ಲಾರಿ ಗುದ್ದಿಸಿ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಲಾರಿ ಡಿಕ್ಕಿ ಹೊಡೆದು ಸಾರಿಗೆ ಇಲಾಖೆ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಶಕುನಿಗೌಡ ಸಾವನ್ನಪ್ಪಿದ ಪ್ರಕರಣ ಸ್ಫೋಟಕ ತಿರುವು ಪಡೆದಿದ್ದು ಇದು ಅಪಘಾತವಲ್ಲ ಕೊಲೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಶನಿವಾರ ಅಪಘಾತದ ಬಳಿಕ ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಿದ್ದ. ಬಳಿಕ ಲಾರಿ ಪತ್ತೆಯಾಗಿದ್ದು, ಲಾರಿಯನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ವೇಳೆ ಲಾರಿಯಲ್ಲಿ ಅಕ್ಕಿ ಮೂಟೆಗಳಿರುವುದು ಕಂಡುಬಂದಿದೆ. ಕೂಡಲೇ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಭಾನುವಾರ ಲಾರಿಯಲ್ಲಿದ್ದ ಅಕ್ಕಿ ಮೂಟೆಗಳನ್ನು ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ ವೇಳೆ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಸ್ ತಡೆಯಲು ಹೋಗುತ್ತಿದ್ದ ಶಕುನಿಗೌಡ ಖಾಕಿ ಡ್ರೆಸ್‌ನಲ್ಲಿ ಇದ್ದುದ್ದರಿಂದ ಅವರು ಪೊಲೀಸ್ ಇರಬಹುದು ಎಂದು ಶಂಕಿಸಿ, ಸಿಕ್ಕಿ ಬೀಳುವ ಭಯದಲ್ಲಿ ಲಾರಿ ಚಾಲಕ ಡಿಕ್ಕಿ ಹೊಡೆದು ಕೊಲೆ ಮಾಡಿರುವುದು ಬಯಲಾಗಿದೆ.
ಶನಿವಾರ ಬೆಳಿಗ್ಗೆ ಆಲೂರು ತಾಲೂಕಿನ ಪಾಳ್ಯ ಬಳಿ ನಲ್ಲೂರು-ಮಗ್ಗೆ ಮಾರ್ಗದ ಸಾರಿಗೆ ಬಸ್ ತಡೆದು ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸಲು ರಾಷ್ಟ್ರೀಯ ಹೆದ್ದಾರಿ 75ನ್ನು ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ತಪಾಸಣಾ ಇನ್ಸ್‌ಪೆಕ್ಟರ್ (ಹಾಸನ ವಿಭಾಗೀಯ ತನಿಖಾ ಸಂಚಾರ ನಿಯಂತ್ರಕ ದಳ) ಶಕುನಿಗೌಡ (57) ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆ ನಂತರ ರಸ್ತೆ ದಾಟುವಾಗ ವೇಗವಾಗಿ ಬಂದು ನಿಯಂತ್ರಣ ಸಿಗದೆ ಲಾರಿ ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿತ್ತು.
ಅಪಘಾತದ ಬಳಿಕ ಲಾರಿಯನ್ನು ನಿಲ್ಲಿಸದೆ ಚಾಲಕ ದೇವರಾಜು ಎಸ್ಕೆಪ್ ಆಗಿದ್ದ. ಅಪಘಾತದ ನಂತರ ಪೊಲೀಸರು ಲಾರಿಗಾಗಿ ಹುಡುಕಾಡುತ್ತಿದ್ದ ವೇಳೆ ಯಡಿಯೂರು ಗಡಿ ಬಳಿ ಲಾರಿ ಪತ್ತೆಯಾಗಿತ್ತು. ಲಾರಿ ಚಾಲಕ ದೇವರಾಜು ಲಾರಿ ನಿಲ್ಲಿಸಿ ಕೀ ಜೊತೆ ವಾಹನದ ದಾಖಲಾತಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ.
ಶನಿವಾರ ರಾತ್ರಿ ಲಾರಿ ಮಾಲೀಕ ಇನ್ನೊಂದು ಕೀ ತಂದುಕೊಟ್ಟಿದ್ದು ಪೊಲೀಸರು ಲಾರಿಯನ್ನ ವಶಕ್ಕೆ ಪಡೆದು ಪರಿಶೀಲಿಸಿದ ವೇಳೆ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಆಹಾರ ಇಲಾಖೆ ಅಧಿಕಾರಿಗಳು ಲಾರಿಯಲ್ಲಿದ್ದ ಅಕ್ಕಿ ಮೂಟೆಗಳನ್ನು ಪರಿಶೀಲಿಸಿದ ವೇಳೆ ಅಕ್ರಮ ಸಾಗಾಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಯಾವಾಗ ಅಕ್ರಮ ಅಕ್ಕಿ ಸಾಗಾಟ ಎಂದು ಸುದ್ದಿ ತಿಳಿಯುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರಿಗೆ ಬೆಚ್ಚಿ ಬೀಳುವ ಸತ್ಯ ತಿಳಿದಿದೆ.
ಏಂ-52-8-3730 ನಂಬರ್‌ನ ಲಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರು ಕಡೆಗೆ 83 ಚೀಲ ಬಾಯ್ಸ್ ಅಕ್ಕಿ ಚೀಲಗಳು ಹಾಗೂ 123 ಪಡಿತರ ಅಕ್ಕಿ ಮೂಟೆಗಳನ್ನು ತುಂಬಿಕೊಂಡು ತೆರಳುತ್ತಿದ್ದ ವೇಳೆ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಶಕುನಿಗೌಡ ಬಸ್ ನಿಲ್ಲಿಸಿಲು ಕೈತೋರಿದ್ದಾರೆ. ಅವರು ಖಾಕಿ ಡ್ರೆಸ್‌ನಲ್ಲಿ ಇದ್ದಿದ್ದರಿಂದ ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂದು ಹೆದರಿದ ಲಾರಿ ಚಾಲಕ ದೇವರಾಜು ಶಕುನಿಗೌಡ ಅವರಿಗೆ ಡಿಕ್ಕಿ ಹೊಡೆದು ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿರುವುದು ತನಿಖೆ ವೇಳೆ ಬಯಲಾಗಿದೆ.
Hassan: The khaki clothes worn by KSRTC ticket inspection inspector Shakuni Gowda cost his life, and a lorry driver who was transporting illegal rice deliberately hit him with a lorry, mistaking him for a policeman, police investigation has revealed.










