11.5 C
Munich
Home News Hassan:ಹಾಸನ:ಅಚ್ಚುಮೆಚ್ಚಿನ ಮೇಡಂ ತೇಜಸ್ವಿನಿಗೆ ಡಾಕ್ಟರೇಟ್ ಗೌರವ | ಹಾಸನದ ಗ್ರಾಮೀಣ ಪ್ರತಿಭೆಗೆ ಕುವೆಂಪು ವಿವಿಯಿಂದ ಪಿಎಚ್‌ಡಿ

Hassan:ಹಾಸನ:ಅಚ್ಚುಮೆಚ್ಚಿನ ಮೇಡಂ ತೇಜಸ್ವಿನಿಗೆ ಡಾಕ್ಟರೇಟ್ ಗೌರವ | ಹಾಸನದ ಗ್ರಾಮೀಣ ಪ್ರತಿಭೆಗೆ ಕುವೆಂಪು ವಿವಿಯಿಂದ ಪಿಎಚ್‌ಡಿ

ಕುವೆಂಪು ವಿಶ್ವವಿದ್ಯಾನಿಲಯ ಘಟಿಕೋತ್ಸವದಲ್ಲಿ ಡಾ. ತೇಜಸ್ವಿನಿ ಎಂ.ಎಸ್. ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ
ಗ್ರಾಮೀಣ ಹಿನ್ನೆಲೆಯಿಂದ ಹೊರಹೊಮ್ಮಿದ ಹಾಸನದ ತೇಜಸ್ವಿನಿ ಎಂ.ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಗೌರವ

Hassan,ಹಾಸನ,ಮೇ,07,2026(www.kannadapost.com): ಹಾಸನ ಜಿಲ್ಲೆಯ ಮಂಡಲೀಕನಹಳ್ಳಿ ಗ್ರಾಮದ ತೇಜಸ್ವಿನಿ ಎಂ.ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪ್ರದಾನ. ಗ್ರಾಮೀಣ ರಸ್ತೆ ಸಾರಿಗೆ ಕುರಿತ ಅಧ್ಯಯನಕ್ಕೆ ಡಾಕ್ಟರೇಟ್ ಗೌರವ ಲಭಿಸಿದೆ.

ಬಡತನದ ಕುಟುಂಬದಲ್ಲಿ ಜನಿಸಿ, ಗ್ರಾಮೀಣ ಪರಿಸರದಲ್ಲಿ ಶಿಕ್ಷಣ ಪಡೆದು, ಅಪಾರ ಶ್ರಮ ಮತ್ತು ದೃಢ ಸಂಕಲ್ಪದ ಮೂಲಕ ಇಂದು “ಡಾ. ತೇಜಸ್ವಿನಿ ಎಂ.ಎಸ್.” ಆಗಿ ಹೊರಹೊಮ್ಮಿರುವ ಚನ್ನರಾಯಪಟ್ಟಣ ತಾಲೂಕಿನ ಮಂಡಲೀಕನಹಳ್ಳಿ ಗ್ರಾಮದ ಪ್ರತಿಭಾವಂತ ಶಿಕ್ಷಕಿಗೆ ಹೃದಯಪೂರ್ವಕ ಅಭಿನಂದನೆಗಳು. 🎓👏

ಶಿವಮೊಗ್ಗದ Kuvempu University ಯಲ್ಲಿ ನಡೆದ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ Thawar Chand Gehlot ಅವರು ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವುದು ಹಾಸನ ಜಿಲ್ಲೆಯಿಗೇ ಹೆಮ್ಮೆಯ ಕ್ಷಣವಾಗಿದೆ.

ಅರ್ಥಶಾಸ್ತ್ರ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿದ ಡಾ. ತೇಜಸ್ವಿನಿ ಅವರು “A Study of Road Transportation in Karnataka – With Special Reference to Hassan District” ವಿಷಯದ ಮೇಲೆ ಸಂಶೋಧನೆ ನಡೆಸಿ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಹಾಸನ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆ ಸಂಪರ್ಕ, ಜನರ ಜೀವನಮಟ್ಟ, ಆರ್ಥಿಕ ಅಭಿವೃದ್ಧಿ ಹಾಗೂ ಗ್ರಾಮೀಣ ಬದುಕಿನ ಬದಲಾವಣೆ ಕುರಿತ ಸಮಗ್ರ ಅಧ್ಯಯನ ಅವರ ಸಂಶೋಧನೆಯ ವಿಶೇಷತೆ.

ಪ್ರಸ್ತುತ ಗದಗದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ತೇಜಸ್ವಿನಿ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಡಂ ಎಂದೇ ಗುರುತಿಸಿಕೊಂಡಿದ್ದಾರೆ. ಶಿಕ್ಷಣದ ಜೊತೆಗೆ ಸಮಾಜದ ಸಮಸ್ಯೆಗಳ ಕುರಿತು ಸಂಶೋಧನಾ ಮನೋಭಾವ ಬೆಳೆಸಿಕೊಂಡಿರುವುದು ಯುವಜನತೆಗೆ ಮಾದರಿಯಾಗಿದೆ.

ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿನಿಯೊಬ್ಬಳು ಶ್ರಮ, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಎಂತಹ ಎತ್ತರ ತಲುಪಬಹುದು ಎಂಬುದಕ್ಕೆ ಡಾ. ತೇಜಸ್ವಿನಿ ಅವರು ಜೀವಂತ ಉದಾಹರಣೆ. ಅವರ ಈ ಸಾಧನೆ ಅನೇಕ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಲಿ. 🌸

error: Content is protected !!