ಹಾಸನ : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳ ಹೋಬಳಿ, ಬಿ.ಚೋಳೇನಹಳ್ಳಿ ಗ್ರಾಮದ ಲೇಟ್ ಕೃಷ್ಣಮೂರ್ತಿ ಅವರ ಧರ್ಮಪತ್ನಿ ಶತಾಯುಷಿ ಚಂದ್ರಮ್ಮ (118) ನಿಧನರಾಗಿದ್ದಾರೆ.
ಕಳೆದ ಒಂದೆರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಶನಿವಾರ ಬೆಳಗ್ಗೆ 10.30 ಕ್ಕೆ ವೈಕುಂಠವಾಸಿಗಳಾಗಿದ್ದಾರೆ.
ಮೂರು ಮಂದಿ ಗಂಡು ಮಕ್ಕಳಲ್ಲಿ ಈಗಾಗಲೇ ಇಬ್ಬರು ಅಗಲಿದ್ದರು. ರಾಜಣ್ಣ ಎಂಬ ಹಿರಿಯ ಮಗ ಅಜ್ಜಿಯ ಹಾರೈಕೆ ಮಾಡುತ್ತಿದ್ದರು. ಚನ್ನರಾಯಪಟ್ಟಣ ತಾಲೂಕಿನಲ್ಲಿಯೇ ಶತಾಯುಷಿ ಅಜ್ಜಿಯಾಗಿದ್ದು, ಇವರ ನಿಧನಕ್ಕೆ ಶಾಸಕ ಸಿಎನ್ ಬಾಲಕೃಷ್ಣ, ಮಾಜಿ ಎಂಎಲ್ಸಿ ಎಂ.ಎ ಗೋಪಾಲಸ್ವಾಮಿ, ಸಿ.ಎಸ್ ಪುಟ್ಟೇಗೌಡ, ಜಿಲ್ಲಾ ಶ್ರೀ ವೈಷ್ಣವ ಸೇವಾ ಸಭಾದ ಅಧ್ಯಕ್ಷರಾದ ಒಳಗೇರಹಳ್ಳಿ ಶ್ರೀಧರ ಮೂರ್ತಿ, ಶ್ರವಣಬೆಳಗೊಳ ಹೋಬಳಿ ಅರ್ಚಕರ ಸಂಘದ ಅಧ್ಯಕ್ಷ ನಾಗರಾಜ್ ಸಿಂಗ್, ವಿಷಾದ ವ್ಯಕ್ತಪಡಿಸಿದ್ದು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಪತ್ರಕರ್ತ ಸುನಿಲ್ ಕುಂಬೇನಹಳ್ಳಿ ಅವರ ಮುತ್ತಜ್ಜಿ . ಇವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಚೋಳೆನಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಗುವುದು










