ಹಾಸನ: ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖಾ ತಂಡಕ್ಕೆ ಬಹುಮಾನ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೆಂಡಾಮಂಡಲರಾಗಿದ್ದಾರೆ.
ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು, ರೇವಣ್ಣ ನನ್ನ ಮನೆಯಲ್ಲಿದ್ದಾಗ ಬಂದ ಎಸ್.ಐ.ಟಿ. ತನಿಖಾಧಿಕಾಧಿರಿಗಳು ನಿಮ್ಮನ್ನು ಬಂಧಿಸಲಾಗಿದೆ ಬನ್ನಿ ಎಂದು ಕರೆದೊಯ್ದಿದ್ದರು.
ರೇವಣ್ಣನ ಕುಟುಂಬವನ್ನು ಮುಗಿಸಿದ್ದಕ್ಕಾಗಿ ನಮ್ಮ ಎದುರಾಳಿಗಳು, ಈಗ ಅಧಿಕಾರದಲ್ಲಿರುವವರು ಅಧಿಕಾರಿಗಳಿಗೆ ಪುರಸ್ಕಾರ ನೀಡಿದ್ದಾರೆ ಎಂದು ಕಿಡಿಕಾರಿದರು.
ಕಾಲ ಬರುತ್ತದೆ. ನಾನು ದೈವವನ್ನು ನಂಬುತ್ತೇನೆ. ಕಾಲ ಬಂದಾಗ ಎಲ್ಲವೂ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.










