ಹಾಸನ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಮಹತ್ವದ ಸೇವೆಗಾಗಿ ಡಾ. ಎಚ್.ಜಿ. ತೇಜಸ್ವಿ ಅವರಿಗೆ ‘ಬೆಸ್ಟ್ ಕಮ್ಯುನಿಟಿ ಚಾಂಪಿಯನ್’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ ಅವರು ಕಲ್ಬುರ್ಗಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಆಯೋಜಿಸಿದ್ದ 35ನೇ ರಾಜ್ಯ ವಾರ್ಷಿಕ ‘ಕರ್ನಾಟಕ ಅಸೋಸಿಯೇಶನ್ ಆಫ್ ಕಮ್ಯುನಿಟಿ ಹೆಲ್ತ್’ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.










