ಅ.25ರಂದು ಯೋಗ ಸಾಧಕರಿಗೆ ಪ್ರಶಸ್ತಿ ಪ್ರದಾನ: ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ

ಹಾಸನ(kannadapost.com): ಕರ್ನಾಟಕ ರಾಜ್ಯಾದ್ಯಂತ ಶಿಕ್ಷಕರ ದಿನಾಚರಣೆ ಅಂಗವಾಗಿ ಯೋಗ ಸಾಧಕರು ಹಾಗೂ ಯೋಗ ಶಿಕ್ಷಕರ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಬಿರುದು ಪ್ರಶಸ್ತಿ ನೀಡಿ ಗೌರವಿಸುವ ಯೋಜನೆಯನ್ನು ಕಳೆದ ವರ್ಷದಿಂದ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ಅದರಂತೆ, ಈ ಬಾರಿ ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಅಕ್ಟೋಬರ್ 25, 2026 ರಂದು ಭಾನುವಾರದಂದು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‌ನಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಹಾಸನ ಜಿಲ್ಲಾ ಯೋಗ ಸಂಸ್ಥೆಯ ಅಧ್ಯಕ್ಷ  ಕೃಷ್ಣಪ್ಪ ತಿಳಿಸಿದ್ದಾರೆ.

ಆಯ್ಕೆಯಾಗಿರುವ ಪ್ರಶಸ್ತಿ ವಿಜೇತರು ಮೇಲ್ಕಂಡ ದಿನದಂದು ಅಪರಾಹ್ನ 1.00 ಗಂಟೆಯೊಳಗೆ ಸೂಚಿಸಿರುವ ಸ್ಥಳದಲ್ಲಿ ಹಾಜರಾಗಿ, ಮುಖ್ಯ ಸಂಯೋಜಕರಾದ ಶ್ರೀ ನಾಗೇಶ್‌ಗುರೂಜಿ (ಮೊಬೈಲ್ ಸಂಖ್ಯೆ: 9739294975) ಇವರಲ್ಲಿ ವರದಿ ಮಾಡಿಕೊಳ್ಳುವಂತೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಐ. ನಿರಂಜನ್ ರಾಜ್ ಕೋರಿದ್ದಾರೆ.

ಬಿರುದು ಪ್ರಶಸ್ತಿ ವಿಜೇತರ ವಿವರ:

1. ಯೋಗಶ್ರೀ ವಿಭಾಗ:

  1. ಮಂಜುನಾಥ ಕೆ.ಬಿ. (ಹಾಸನ ತಾಲ್ಲೂಕು)
  2. ಪೋಣೇಶ್ (ಹಾಸನ ತಾಲ್ಲೂಕು)
  3. ಸುರೇಶ್ ಪ್ರಜಾಪತಿ (ಹಾಸನ ತಾಲ್ಲೂಕು)
  4. ಎಂ.ವಿ. ಗಿರೀಶ್ (ಹಾಸನ ತಾಲ್ಲೂಕು)
  5. ಪ್ರಶಾಂತ್ (ಸಕಲೇಶಪುರ)
  6. ದಾಮೋದರ (ಹಾಸನ ತಾಲ್ಲೂಕು)
  7. ತೇಜೇಶ್ (ಆಲೂರು ತಾಲ್ಲೂಕು)
  8. ಸಂಜಯ್ ಎಸ್. (ಬೇಲೂರು)
  9. ಹೇಮಂತ್ ಕುಮಾರ್ (ಅರಸೀಕೆರೆ)
  10. ಮಂಜುನಾಥ ಕೆ. (ಚನ್ನರಾಯಪಟ್ಟಣ)

2. ಯೋಗ ಜ್ಯೋತಿ (ಮಹಿಳೆಯರಿಗೆ) ವಿಭಾಗ:

  1. ಎನ್.ಎಸ್. ಶಾರದ
  2. ತೇಜ ರಾಜಶ್ರೀ
  3. ಸಂಧ್ಯಾ ಡಿ.
  4. ತುಳಸಿ ಎಂ.ವೈ.
  5. ರಮ್ಯ ಡಿ.ಜೆ.
  6. ನಾಗರತ್ನ
  7. ಮಂಜುಳ ಎಲ್.ಡಿ. (ಎಲ್ಲರೂ ಹಾಸನ ತಾಲ್ಲೂಕು)
  8. ಜ್ಯೋತಿ ನಂದೀಶ್ (ಚನ್ನರಾಯಪಟ್ಟಣ)

3. ಯೋಗರತ್ನ ವಿಭಾಗ:

  1. ಲಕ್ಷ್ಮೀ ರಂಗನಾಥ್
  2. ಜಗದೀಶ್ ಎಲ್.
  3. ಕೆ.ಎಂ. ಬಸವರಾಜ್
  4. ಕೆ.ಎಂ. ರುದ್ರಶೆಟ್ಟಿ (ಸಕಲೇಶಪುರ)

4. ಯೋಗ ಜೀವಮಾನ ಸಾಧನೆ (60 ವರ್ಷ ಮೇಲ್ಪಟ್ಟವರು) ವಿಭಾಗ:

  1. ಟಿ.ಪಿ. ಮಂಜುನಾಥ್
  2. ರಾಧಾ ತಿವಾರಿ (ಹಾಸನ ತಾಲ್ಲೂಕು)
  3. ಇಡುಪ್ರಸಾದ್ (ಆಲೂರು ತಾಲ್ಲೂಕು)
  4. ಪ್ರಭಾಕರ್ ಜಿ. (ಚನ್ನರಾಯಪಟ್ಟಣ)
  5. ಕೆ.ಎನ್. ರುದ್ರಯ್ಯ (ಬೇಲೂರು ತಾಲ್ಲೂಕು)

ಪ್ರಶಸ್ತಿ ಭಾಜನರಾದ ಎಲ್ಲಾ ಸಾಧಕರಿಗೂ ಹಾಸನ ಜಿಲ್ಲಾ ಯೋಗ ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವರದಿ: ಜಿ.ಐ. ನಿರಂಜನ್ ರಾಜ್ ಕಾರ್ಯದರ್ಶಿ, ಹಾಸನ ಜಿಲ್ಲಾ ಯೋಗ ಸಂಸ್ಥೆ (ರಿ.) ಹಾಸನ ಮೊಬೈಲ್: 9900839475