ಹಾಸನ : ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವಿವಿಧ ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ ಫಲಾನುಭವಿಗಳ ಆಯ್ಕೆ ಸಮಿತಿಗೆ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರನ್ನಾಗಿ ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಖಜಾಂಚಿ ಕೆ. ಎಸ್. ಜಗದೀಶ್ ರವರನ್ನು ಆಯ್ಕೆ ಮಾಡಿ ನಿಗಮದ ಜಿಲ್ಲಾ ಆಯ್ಕೆ ಸಮಿತಿಯ ಅಧ್ಯಕ್ಷರು ಆದೇಶಿಸಿರುತ್ತಾರೆ.
ನೂತನ ನಾಮನಿರ್ದೇಶಿತ ಸದಸ್ಯ ಕೆ. ಎಸ್. ಜಗದೀಶ್ ರವರನ್ನು ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ವಿ. ಹರೀಶ್ ಅಭಿನಂದಿಸಿದ್ದಾರೆ.










