0.5 C
Munich
Home ಜಿಲ್ಲೆ ಹಾಸನ: ಕೇಂದ್ರ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಹೋರಾಟಕ್ಕೆ ಹೇಮಲತಾ ಕರೆ

ಹಾಸನ: ಕೇಂದ್ರ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಹೋರಾಟಕ್ಕೆ ಹೇಮಲತಾ ಕರೆ

ಹಾಸನ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಶ್ರಮಶಕ್ತಿ ನಿರ್ಣಾಯಕ ಹೋರಾಟ ನಡೆಸಬೇಕು ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಕಾಂ.ಡಾ. ಹೇಮಲತಾ ಕರೆ ನೀಡಿದರು.

ನಗರದ ಡಾ.ಅಂಬೇಡ್ಕರ್ ಭವನದ ಕಾಂ.ಎಂ. ಆರ್ಲ್ಲಿ ಶೆಣೈ ಸಭಾಂಗಣದಲ್ಲಿ ಕಾಂ.ಹರೀಶ್ ನಾಯಕ್ ವೇದಿಕೆಯಲ್ಲಿ ಇಂದಿನಿಂದ ಆರಂಭವಾಗಿರುವ ದಿನಗಳ ಸಿಐಟಿಯು ೧೬ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ದುಡಿಯುವ ಜನ ವಿರೋಧಿಯಾದ ಕೇಂದ್ರ ಶ್ರಮ ಶಕ್ತಿ ನೀತಿಗಳ ವಿರುದ್ದ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಮಿಕರು ಶತಮಾನಗಳಿಂದ ಹೋರಾಟದ ಮೂಲಕ ಪಡೆದ ಹಕ್ಕುಗಳನ್ನ ಕಾನೂನು ತಿದ್ದುಪಡಿ ಮೂಲಕ ನಾಶಮಾಡಲಾಗುತ್ತಿದೆ. ಶ್ರಮ ಶಕ್ತಿ ಯೋಜನೆ ಮೂಲಕ ಕಾರ್ಮಿಕ ಸಚಿವಾಲಯವನ್ನೇ ನಿತ್ರಾಣಗೊಳಿಸುವ ಕೆಲಸ ನಡೆಯುತ್ತಿದೆ. ಕಾರ್ಮಿಕ ಇಲಾಖೆ ಕಾರ್ಮಿಕರ ರಕ್ಷಣೆ ಮಾಡುವ ಬದಲು ಮಾಲೀಕರ ಪರವಾಗಿ ವಕಾಲತ್ತು
ವಹಿಸೋ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.

ಶ್ರಮ ಶಕ್ತಿ ಯೋಜನೆ ಸಂವಿಧಾನಾತ್ಮಕ ಹಕ್ಕುಗಳನ್ನು ನಾಶ ಮಾಡುವ ಮನುಸ್ಮೃತಿ ಆಧಾರಿತ ನೀತಿಗಳ ಜಾರಿಗೆ ಸಂಚು ರೂಪಿಸಿದೆ, ಮಹಿಳಾ ಶೋಷಣೆ, ದೀನ ದಲಿತರ ಶೋಷಣೆ
ಈ ನೀತಿಯಲ್ಲಿ ಅಡಗಿದೆ. ಇದು ಅರ್‌ಎಸ್‌ಎಸ್ ನೀತಿಗಳನ್ನು ದುಡಿಯುವ ಜನರ ಮೇಲೆ ಹೇರುವ ಯತ್ನ ಎಂದು ಕಿಡಿ ಕಾರಿದರು.

ಕೇಂದ್ರ ಸರ್ಕಾರ ಕಳೆದ ಹನ್ನೊಂದು ವರ್ಷಗಳಿಂದ ಕಾರ್ಮಿಕ ಸಂಘಟನೆಗಳ ಜೊತೆಗೆ ಕನಿಷ್ಠ ಸಮಾಲೋಚನೆ ನಡೆಸಲಿಲ್ಲ, ಕಾರ್ಮಿಕ ಹಕ್ಕುಗಳ ಜಾರಿ ಬಗ್ಗೆ ಕಾರ್ಮಿಕ ಸಂಘಟನೆಗಳ ಸಮ್ಮೇಳನ ನಡೆಸಿಲ್ಲ ಎಂದು ದೂರಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ ಕಾರ್ಮಿಕ ಕಾನೂನಿನ ಉಲ್ಲಂಘನೆ, ಕ್ರಿಮಿನಲ್ ಅಪರಾಧ ಅಲ್ಲ ಅನ್ನೋ ನೀತಿ ಜಾರಿಯಾಗಿದೆ.

ಬದಲಾಗಿ ಅದು ಕೇವಲ ದಂಡಕ್ಕೆ ಸೀಮಿತಗೊಳಿಸಲಾಗಿದೆ. ಕಾರ್ಮಿಕರು ಹೋರಾಟಕ್ಕೆ ಕರೆ ನೀಡಿದರೆ ಅವರನ್ನು ಗೃಹ ಬಂಧನಕ್ಕೆ ಒಳಪಡಿಸುವ ಮೂಲಕ ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನ ನಾಶಮಾಡಲಾಗುತ್ತಿದೆ.
ಇದು ಕೇವಲ ಬಿಜೆಪಿ ಅಧಿಕಾರದಲ್ಲಿರೋ ರಾಜ್ಯದಲ್ಲಿ ಮಾತ್ರ ಅಲ್ಲ ಕಾಂಗ್ರೆಸ್ ಆಡಳಿತ ಇರೋ ರಾಜ್ಯದಲ್ಲೂ ನಡೆಯುತ್ತಿದೆ ಎಂದರು.

ಕೂಲಿ, ಕೆಲಸ, ಸಾಮಾಜಿಕ ಅಭದ್ರತೆ, ಕಾರ್ಮಿಕರನ್ನ ಆತಂಕದಲ್ಲಿ ಇರುವಂತೆ ಮಾಡಿದೆ, ಇದಕ್ಕೆ ಬಂಡವಾಳ ಶಾಹಿ ವ್ಯವಸ್ಥೆಯ ಬಿಕ್ಕಟ್ಟು ಕಾರಣ ಆಗಿದ್ದು, ಇದರ ಹೊರೆಯನ್ನ ಕಾರ್ಮಿಕರ ಮೇಲೆ ವರ್ಗಾವಣೆ ಮಾಡಿ ಶೋಷಣೆ ಮಾಡಲಾಗುತ್ತಿದೆ. ಶೋಷಣೆ ವಿರೋಧಿಸಿ ಜಗತ್ತಿನ ದುಡಿಯೋ ವರ್ಗದ ಹೋರಾಟ ಕೂಡ ಹೆಚ್ಚಾಗಿದೆ, ಆದರೆ ದುಡಿಯುವ ಜನರು ಹೋರಾಟಕ್ಕೆ ಇಳಿದರೆ ಬೇರೆ ಬೇರೆ ಷಡ್ಯಂತ್ರದ ಮೂಲಕ ಹೋರಾಟ ಒಡೆಯಲು, ದಿಕ್ಕು ತಪ್ಪಿಸಲು ಯತ್ನ ನಡೆಯುತ್ತಿದ ಎಂದು ದೂರಿದರು.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕ್ರಾಂತಿ ಘೋಷಣೆ ನಡುವೆ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಧ್ವಜಾರೋಹಣ ನೆರವೇರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಎನ್.ಐ. ಉಮೇಸ್ಟಿ, ರಾಜ್ಯ ಉಪಾಧ್ಯಕ್ಷ ವಿಜೆಕೆ ನಾಯರ್, ಸ್ವಾಗತ ಸಮಿತಿ ಅಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ ಮತ್ತಿತರಿದ್ದರು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ಕಾರ್ಮಿಕ ಪ್ರತಿನಿಧಿಗಳನ್ನು ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಚ್.ಎನ್. ಪರಮಶಿವಯ್ಯ ಸ್ವಾಗತಿಸಿದರು.

error: Content is protected !!