ಚನ್ನರಾಯಪಟ್ಟಣ: ನೂತನ ತಂತ್ರಜ್ಞಾನದಿಂದ ಪತ್ರ ಬರಹಗಾರರಿಗೆ ಉದ್ಯೋಗ ಅಭದ್ರತೆ – ಗುಣಶೇಖರ್ ಆತಂಕ

Gunasekhar, a member of the Taluk Letter Writers' Association, expressed regret that the introduction of new technology is causing job insecurity.

ಚನ್ನರಾಯಪಟ್ಟಣ: ನೂತನ ತಂತ್ರಜ್ಞಾನದ ಅಳವಡಿಕೆಯಿಂದ ಉದ್ಯೋಗ ಅಭದ್ರತೆ ಉಂಟಾಗುತ್ತಿದೆ ಎಂದು ತಾಲ್ಲೂಕು ಪತ್ರ ಬರಹಗಾರರ ಸಂಘದ ಸದಸ್ಯ ಗುಣಶೇಖರ್ ವಿಷಾದ ವ್ಯಕ್ತಪಡಿಸಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಎಲ್ಲಾ ಪತ್ರ ಬರಹಗಾರರು ದಸ್ತಾವೇಜು ಕೆಲಸ ಸ್ಥಗಿತಗೊಳಿಸಿ ಮೌನ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಅವರು ಮಾತನಾಡಿದರು.

ಸುಮಾರು ವರ್ಷಗಳಿಂದ ದಸ್ತಾವೇಜು ಬರವಣಿಗೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಲಕ್ಷಾಂತರ ಜನರ ಬದುಕನ್ನು ನೂತನ ತಂತ್ರಜ್ಞಾನ ಕಸಿದುಕೊಳ್ಳುತ್ತಿದೆ ಎಂದು ದೂರಿದರು.

ನಾವುಗಳು ನೂತನ ತಂತ್ರಜ್ಞಾನ ಅಳವಡಿಕೆ ಬೇಡ ಎನ್ನುವುದಿಲ್ಲ ಆದರೆ ಪೇಪರ್ ಲೆಸ್, ಫೇಸ್ ಲೆಸ್ ನಂತಹ ಮಾದರಿ ಕೈ ಬಿಟ್ಟು ಯಥಾಸ್ಥಿತಿಯಲ್ಲಿ ನೋಂದಣಿ ಪ್ರಕ್ರಿಯೆ ಮುಂದುವರೆದರೆ ಎಲ್ಲಾ ಪತ್ರ ಬರಹಗಾರರಿಗೆ ಉದ್ಯೋಗ ನೀಡುವ ಮೂಲಕ ಭದ್ರತೆ ಒದಗಿಸಿಕೊಡುವುದು ಬಹಳ ಮುಖ್ಯವಾದ ವಿಚಾರವಾಗಿದೆ ಎಂದರು.

ಕಾವೇರಿ ೧, ಕಾವೇರಿ ೨, ಕಾವೇರಿ ೩ ನಂತಹ ತಂತ್ರಜ್ಞಾನ ಅಳವಡಿಸಿ ಮತ್ತೆ ನಮ್ಮಗಳನ್ನ ನಿರುದ್ಯೋಗಿಗಳಾಗಿ ಮಾಡಬೇಡಿ. ಕಾವೇರಿ ೩ ತಂತ್ರಜ್ಞಾನ ಅಳವಡಿಕೆ ಮಾಡಿದ್ದೇ ಆದರೆ ಬಹಳ ವರ್ಷಗಳಿಂದ ಪತ್ರ ಬರಹಗಾರರಾಗಿ ಕೆಲಸ ನಿರ್ವಹಿಸುತ್ತಿರುವ ನಮಗೆ ಬೇರೆ ರಾಜ್ಯಗಳಲ್ಲಿ ನೀಡಿರುವಂತೆ ಪತ್ರ ಬರಹಗಾರರಿಗೆ ಪ್ರತೇಕ ಐಡಿ ನೀಡಿದ್ದೇ ಆದರೆ ಉದ್ಯೋಗ ಅಭದ್ರತೆ ನಿಲ್ಲಿಸಬಹುದು ಎಂದರು.

ಪತ್ರ ಬರಹಗಾರರಾದ ಕೇಶವಮೂರ್ತಿ, ಆನಂದ್, ಹರೀಶ್, ಸುಬ್ರಹ್ಮಣ್ಯ, ಗುರುರಾಜ್ ಇನ್ನೂ ಮುಂತಾದವರು ಹಾಜರಿದ್ದರು.

Gunasekhar, a member of the Taluk Letter Writers’ Association, expressed regret that the introduction of new technology is causing job insecurity.