ಅರಸೀಕೆರೆ: ನಗರದ ಬೆಥನಿ ಸೆಂಟ್ರಲ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಜಿ.ಬಿ. ಧನ್ವಿನ್ ಪ್ರಸಕ್ತ ಸಾಲಿನ ಇಂಡಿಯಾ ಬುಕ್ ಆಪ್ ರೆಕಾರ್ಡ್ ಸೇರಿದ್ದಾನೆ.
ದೇಶೀಯ ಹಾಗೂ ವಿದೇಶೀಯ 2468 ಭಿನ್ನ ವಿಭಿನ್ನ ಸ್ಟ್ಯಾಂಪ್ ಗಳನ್ನು ಸಂಗ್ರಹಿಸಿ ವಿಶಿಷ್ಟ ಸಾಧನೆ ಮಾಡಿದ್ದು ಶಾಲೆಗೆ ಕೀರ್ತಿ ತಂದಿದ್ದಾನೆ.
106 ಚಿಕ್ಕ, ಸೀಲ್ಡ್ 551, ಅನ್ ಸೀಲ್ಡ್ 102, ಆಣೆ ಸ್ಟ್ಯಾಂಪ್ 25, ವಿದೇಶಿ 1479 ಹಾಗೂ 74 ವಿನೂತನ ಪೋಸ್ಟ್ ಕವರ್ ಕಲೆ ಹಾಕುವ ಮೂಲಕ ಪ್ರತಿಭೆ ಪ್ರದರ್ಶಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಶಾಲೆಯ ಪ್ರಾಂಶುಪಾಲರಾದ ಐರಿನ್ ಡಿಸೌಜಾ, ಸುಮನಾ ತೆಲ್ವ ಡಿಸೌಜಾ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಶಿಕ್ಷಕರಾದ ಬಸವರಾಜ್, ಮಾರ್ಗರೇಟ್, ಸಿಲ್ವಿಯಾ, ಇಮಾಮ್, ಸಿದ್ದೇಶ್ ಆಯೇಷಾ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.
G.B., a 9th class student of Bethany Central School in Arsikere city. Dhanvi is currently in the India book op record.










