ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬೆಂಗಳೂರಿನಿಂದ ಆಗಮಿಸಿ ಗಾಯಾಳುಗಳು ಆರೋಗ್ಯ ವಿಚಾರಿಸಿದರು.

ಕಳೆದ ರಾತ್ರಿ ನಡೆದ ಘೋರ ದುರಂತಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದ ಗೌಡರು, ಇಂದು ಮಧ್ಯಾಹ್ನ ಬೆಂಗಳೂರಿನಿಂದ ಬಂದು ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೊದಲು ಪ್ರವಾಸಿ ಮಂದಿರಕ್ಕೆ ಆಗಮಿಸಿ, ಅಲ್ಲಿಂದ ಹಿಮ್ಸ್ ಗೆ ತೆರಳಿ ಮೊಸಳೆ ಹೊಸಳ್ಳಿ ದುರಂತದಲ್ಲಿ ಬದುಕುಳಿದಿರುವ ಗಾಯಾಳುಗಳು ಮತ್ತವರ ಕಡೆಯವರನ್ನು ಮಾತನಾಡಿಸಿ ಧೈರ್ಯ ಹೇಳಿದರು. ದುರಂತಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ ಗೌಡರು, ಇದು ನಡೆಯಬಾರದಿತ್ತು. ಮೃತಪಟ್ಟವರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಹೆಚ್ಚಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆರಂಭಿಕ ಪರಿಹಾರ ನೀಡಿವೆ. ಈ ಮೊತ್ತವನ್ನು ಮಾನವೀಯ ದೃಷ್ಟಿಯಿಂದ ಮತ್ತಷ್ಟು ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.










