15.2 C
Munich
Home News ಹಿರಿಯ ಪತ್ರಕರ್ತ ಹೆಚ್.ಬಿ. ಮದನ್ ಗೌಡ ಅವರ ಸಹೋದರ ಹೆಚ್.ಬಿ. ಮಲ್ಲೇಶ್ ಗೌಡ ನಿಧನ

ಹಿರಿಯ ಪತ್ರಕರ್ತ ಹೆಚ್.ಬಿ. ಮದನ್ ಗೌಡ ಅವರ ಸಹೋದರ ಹೆಚ್.ಬಿ. ಮಲ್ಲೇಶ್ ಗೌಡ ನಿಧನ

Former president of the Car Drivers' Owners' Association, non-violent leader, and senior journalist H.B. Madan Gowda's brother H.B. Mallesh Gowda passed away due to illness.

ಸಕಲೇಶಪುರ: ಕಾರು ಚಾಲಕರ ಮಾಲೀಕರ ಸಂಘದ ಮಾಜಿ ಅಧ್ಯಕ್ಷ, ಅಹಿಂದ ಮುಖಂಡ, ಹಿರಿಯ ಪತ್ರಕರ್ತ ಹೆಚ್.ಬಿ. ಮದನ್ ಗೌಡ ಅವರ ಸಹೋದರ ಹೆಚ್.ಬಿ. ಮಲ್ಲೇಶ್ ಗೌಡ ಅನಾರೋಗ್ಯದಿಂದ ನಿಧನರಾದರು.

ಹೆತ್ತೂರು ಮೂಲದ ಹೆಚ್.ಬಿ. ಮಲ್ಲೇಶ್ ಗೌಡ (70) ಅವರು ಸಣ್ಣ ವಯಸ್ಸಿನಲ್ಲೇ ಸಕಲೇಶಪುರ ಪಟ್ಟಣಕ್ಕೆ ಬಂದು ಸ್ವಾವಲಂಬಿಯಾಗಿ ಕಾರು ಚಾಲಕರಾಗಿ ಜೀವನ ಆರಂಭಿಸಿ ನಂತರ ರಾಜಕೀಯ ಕ್ಷೇತ್ರದಲ್ಲಿ ಅಹಿಂದ ನಾಯಕರಾಗಿ ಜನಮನ್ನಣೆ ಪಡೆದಿದ್ದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮುರಳಿ ಮೋಹನ್ ಸೇರಿದಂತೆ ಹಲವಾರು ಮುಖಂಡರು ಮೃತರ ಅಂತಿಮ ದರ್ಶನ ಪಡೆದರು.

ಮೃತರು ಪತ್ನಿ ಹಾಗೂ ಪುತ್ರರನ್ನು ಅಗಲಿದ್ದಾರೆ. ಕುಟುಂಬದ ಸದಸ್ಯರು, ಬಂಧುಮಿತ್ರರು ಹಾಗೂ ಸ್ಥಳೀಯರು ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ದುಃಖ ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದರು.

ಮೃತರ ಅಂತಿಮ ಸಂಸ್ಕಾರವನ್ನು ಬುಧವಾರ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

error: Content is protected !!