1 C
Munich
Home News ಪಕ್ಷ ರಾಜಕಾರಣದಿಂದ ದೂರ: ಹಾಸನದಲ್ಲಿ ಉಚ್ಛಾಟಿತ ಬಿಜೆಪಿ ‌ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಘೋಷಣೆ

ಪಕ್ಷ ರಾಜಕಾರಣದಿಂದ ದೂರ: ಹಾಸನದಲ್ಲಿ ಉಚ್ಛಾಟಿತ ಬಿಜೆಪಿ ‌ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಘೋಷಣೆ

Expelled BJP MLA Basanagouda Patil Yatnal said that he will not join any party. Speaking after visiting Hassanambe today, he clarified that he will not join any party when asked about the invitation to join the Shiv Sena.

ಹಾಸನ: ನಾನು ಯಾವುದೇ ಪಕ್ಷ ಸೇರಲ್ಲ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಇಂದು ಹಾಸನಾಂಬೆ ದರ್ಶನ ಪಡೆದು ಬಳಿಕ ಮಾತನಾಡಿದ ಅವರು, ಶಿವಸೇನೆ ಸೇರ್ಪಡೆಗೆ ಆಹ್ವಾನ ಕುರಿತು ಕೇಳಿದ ಪ್ರಶ್ನೆಗೆ ನಾನು ಯಾವುದೇ ಪಕ್ಷದ ಜೊತೆ ಸೇರಲ್ಲ ಎಂದು ಸ್ಪಷ್ಟಪಡಿಸಿದರು.

ನಾನು 2ಆಯ್ಕೆ ಮುಂದಿಟ್ಟಿದ್ದೇನೆ. ಮೊದಲನೆಯದು ಹಿಂದೂ ಮತ ವಿಭಜನೆ ಆಗಬಾರದು. ನಾನು ಪಕ್ಷ ಕಟ್ಟೋಕೆ ಮುನ್ನ ಮತ ವಿಭಜನೆ ಮಾಡುವ ಕೆಟ್ಟ ಕೆಲಸ ಮಾಡಲ್ಲ.ಆದಾಗ್ಯ ಬಿಜೆಪಿಯವರಿಗೆ ಇನ್ನೂ ಯಡಿಯೂರಪ್ಪ ಕುಟುಂಬವೇ ಬೇಕಾಗಿದ್ರೆ ಏನೂ ಮಾಡಲು ಆಗಲ್ಲ. ಯಡಿಯೂರಪ್ಪ ಕುಟುಂಬ ಬಿಟ್ಟು ಬಿಜೆಪಿ ಕಟ್ಟಿದ್ರೆ ಮತ್ತೆ ಹೋಗ್ತೀನಿ ಎಂದರು.

ನಾನು ಯಾವ ರಾಜಕೀಯ ಪಕ್ಷದ ಜೊತೆ ಹೋಗೋದಿಲ್ಲ, ನನ್ನೊಟ್ಟಿಗೆ ಯಾರೂ ಮಾತನಾಡಿಲ್ಲ. ಹಿಂದುತ್ಚದ ಪರವಾಗಿ ರಾಜ್ಯಾದ್ಯಂತ ಓಡಾಡುತ್ತಿದ್ದೇನೆ, ಇತ್ತೀಚೆಗೆ ಮಂಡ್ಯಕ್ಕೆ ಹೋಗಿದ್ದೆ.20ಸಾವಿರ ಜನ ಸೇರಿದ್ರು, ಜನರು ಹೂ ಹಾಕಿ ನೀವೇ ಮುಂದೆ ಸಿಎಂ ಆದರೆ ಮಾತ್ರ ಹಿಂದುಗಳಿಗೆ ರಕ್ಷಣೆ ಎಂದರು. ಆದರೆ ಯಡಿಯೂರಪ್ಪ ರೀತಿ ನಾನು ಹೇಳಿಕೊಳ್ಳೋದಿಲ್ಲ. ಜನ ಕೊಡುವ ತೀರ್ಪಿಗೆ ತಯಾರಿದ್ದೇನೆ ಎಂದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದರೆ ಹಿಂದೂಗಳ ಮೇಲೆ ದಬ್ಬಾಳಿಕೆ ತಡೆಯುತ್ತೇವೆ, ಅನಧಿಕೃತ ಮಸೀದಿಗಳನ್ನ ತಡೆಯುತ್ತೇವೆ, ಕರ್ನಾಟಕದಲ್ಲಿ ಸಾಕಷ್ಟು ಅಕ್ರಮ ಮಸೀದಿ ಇವೆ.ಅವರು ವಾಟರ್ ಬಿಲ್, ಕರೆಂಟ್ ಬಿಲ್ ಕಟ್ಟಲ್ಲ, ನಮ್ಮ ದೇವರ ದುಡ್ಡನ್ನ ಅವರ ವಕ್ಫ್ ಕಟ್ಟಲುಕೊಡ್ತಾರೆ. ಹಿಂದೂ ದೇವರ ಹಣ ನಮ್ಮ ದೇವಾಲಯಕ್ಕೆ ಖರ್ಚಾಗಬೇಕು ಎಂದು ಯತ್ನಾಳ್ ಹೇಳಿದರು.

ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಚರ್ಚೆ ಕುರಿತು, ಲಿಂಗಾಯತ-ವೀರಶೈವ ಒಂದೇ, ಬೇರೆ ಬೇರೆ ಅಲ್ಲ, ಮೂಢನಂಬಿಕೆ, ಅಸ್ಪಶ್ಯತೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ವಿರುದ್ಧ ಬಸವಣ್ಣ ಹೋರಾಟ ಮಾಡಿದ್ದಾರೆ.

ಬಸವಣ್ಣ, ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲ. ಅನುಭವ ಮಂಟಪ ಕಟ್ಟಿದ್ರು, ಅಲ್ಲಿ ಅಲ್ಲಮ ಪ್ರಭು ಅಧ್ಯಕ್ಷರಾಗಿದ್ದರು.ಎಲ್ಲ ಸಮುದಾಯದ ಪ್ರತಿನಿದಿಗಳು ಅಲ್ಲಿದ್ದರು.ಸನಾತನ ಧರ್ಮದಲ್ಲಿ ಏನು ಬದಲಾವಣೆ ಆಗಬೇಕೆಂದು ಚಿಂತನೆ ಮಾಡಿದ್ದರು.

ಅಲ್ಲಿ ಅಕ್ಕಮಹಾದೇವಿ, ಹರಳಯ್ಯ ಎಲ್ಲ ಇದ್ದರು. ಬಣವಣ್ಣ ಯಾವ ವಚದಲ್ಲೂ ಹಿಂದು ಸಮಾಜಕ್ಮೆ ಬೈದಿಲ್ಲ. ಎಂ.ಬಿ ಪಾಟೀಲ್, ಈಶ್ವರ್ ಖಂಡ್ರೆ, ಶಾಮನೂರು ಶಿವಶಂಕರಪ್ಪ ಮೊದಲಾದವರು ಸೇರಿ ಧರ್ಮ ಒಡೆದು ತಮ್ಮ ಸಂಸ್ಥೆ ಉಳಿಸಿಕೊಳ್ಳಲು ಹೊರಟಿದ್ದಾರೆ, ದೊಡ್ಡ ದೊಡ್ಡ ಮೆಡಿಕಲ್ ಕಾಲೇಜು ಕಟ್ಟಿದಾರೆ.ಸಿಕ್ಕಾಪಟ್ಟೆ ಆಸ್ತಿ ಮಾಡಿದ್ದಾರೆ. ಲಿಂಗಾಯತ ಬಡ ಮಕ್ಕಳಿಗೆ ಏನು ಸಹಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

error: Content is protected !!