ಹಾಸನ: ನ.9ರಂದು ಪತ್ರಕರ್ತರ ಸಂಘದ ಚುನಾವಣೆ

Elections will also be held on November 9 for the Hassan District Journalists Association, which is an affiliate of the Karnataka Working Journalists Association. D.J. Rajagopal (Rajesh), editor of Gyandeepa newspaper, has been appointed as the District Election Officer to manage this task smoothly.

ಹಾಸನ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಂಗಸಂಸ್ಥೆಯಾಗಿರುವ ಹಾಸನ ಜಿಲ್ಲಾ ಪತ್ರಕರ್ತರ ಸಂಘಕ್ಕೂ ನ.9 ರಂದು ಚುನಾವಣೆ ನಡೆಯಲಿದೆ. ಈ ಕಾರ್ಯವನ್ನು ಸುಸೂತ್ರವಾಗಿ ನಿರ್ವಹಿಸಲು ಜಿಲ್ಲಾ ಚುನಾವಣಾಧಿಕಾರಿಯಾಗಿ ಜ್ಞಾನದೀಪ ಪತ್ರಿಕೆ ಸಂಪಾದಕ ಡಿ.ಜೆ.ರಾಜಗೋಪಾಲ್(ರಾಜೇಶ್) ಅವರನ್ನು ನೇಮಕ ಮಾಡಲಾಗಿದೆ.

ಚುನಾವಣಾಧಿಕಾರಿಯಾಗಿ ಆಯ್ಕೆಯಾಗಿರುವ ಆದೇಶ ಪತ್ರವನ್ನು ಜಿಲ್ಲಾ ಪತ್ರಕರ್ತರ ಸಂಘದ ಹಾಲಿ ಅಧ್ಯಕ್ಷ ಕೆ.ಹೆಚ್.ವೇಣುಕುಮಾರ್ ಅವರು ಇಂದು ರಾಜೇಶ್ ಅವರಿಗೆ ಸಂಘದ ಕಚೇರಿಯಲ್ಲಿ ಹಸ್ತಾಂತರ ಮಾಡಿದರು. ಬಳಿಕ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯನ್ನು ರಾಜ್ಯ ಚುನಾವಣಾಧಿಕಾರಿಗಳ ನಿರ್ದೇಶನ, ಮಾರ್ಗದರ್ಶನದಂತೆ ನಿಷ್ಪಕ್ಷಪಾತವಾಗಿ ನಡೆಸುವಂತೆ ಮನವಿ ಮಾಡಿದರು.

ರಾಜೇಶ್ ಅವರಿಗೆ ಸಹಾಯಕ ಚುನಾವಣಾಧಿಕಾರಿಯಾಗಿ ಹಲೋ ಹಾಸನ್ ಪತ್ರಿಕೆ ಮುಖ್ಯ ವರದಿಗಾರ ಕಣತೂರು ಎಂ.ಮೋಹನ್ ಆಯ್ಕೆಯಾಗಿದ್ದಾರೆ.