11.8 C
Munich
Home Uncategorized ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಎಚ್.ಜೆ.ಅಮರೇಂದ್ರ ಅಧಿಕಾರ ಸ್ವೀಕಾರ

ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಎಚ್.ಜೆ.ಅಮರೇಂದ್ರ ಅಧಿಕಾರ ಸ್ವೀಕಾರ

ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಹೊಸ ಪ್ರಾಂಶುಪಾಲರಾಗಿ ಡಾ. ಎಚ್. ಜೆ. ಅಮರೇಂದ್ರ ಅವರು ಅಧಿಕಾರ ಸ್ವೀಕರಿಸಿದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರ್. ಟಿ. ದ್ಯಾವೇಗೌಡ, ಪ್ರಧಾನ ಕಾರ್ಯದರ್ಶಿ ಚೌಡವಳ್ಳಿ ಜಗಧೀಶ್, ಹಾಗೂ ಖಜಾಂಚಿ ಹೆಚ್. ಪಿ. ಪಾರ್ಶ್ವನಾಥ್ ಅವರ ಸಮ್ಮುಖದಲ್ಲಿ ಆದೇಶ ಪತ್ರ ಹಸ್ತಾಂತರಿಸಲಾಯಿತು.

ಕಾಲೇಜಿನ ಮೆಕಾನಿಕಲ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಅಮರೇಂದ್ರ, ಇದೇ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು ವಿಶೇಷ.

ಹಿಂದಿನ ಪ್ರಾಂಶುಪಾಲ ಡಾ. ಕೃಷ್ಣಯ್ಯ ಅವರು ಅಧಿಕೃತವಾಗಿ ಚಾರ್ಜ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಬೂವನಹಳ್ಳಿ ಶ್ರೀನಿವಾಸ್, ಬಿ. ಆರ್. ರಾಜಶೇಖರ್, ನಾಗರಾಜ್ ಜ್ಯೆನ್, ಶಾಂತಿಗ್ರಾಮ ಶಂಕರ್, ಬಿ. ಎಸ್. ಸುರೇಶ್, ಕಾಲೇಜು ರಿಜಿಸ್ಟ್ರಾರ್ ಕುಮುದ, ಅಧೀಕ್ಷಕರಾದ ಅರ್. ರಘು ಪ್ರಸಾದ್, ಬಿ. ಆರ್. ರವಿ, ಮಾಧ್ಯಮ ಸಂಯೋಜಕರಾದ ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.

error: Content is protected !!