20.1 C
Munich
Home ಜಿಲ್ಲೆ ಹಾಸನ ಈ ಬಾರಿಯ ಹಾಸನಾಂಬೆ ಉತ್ಸವಕೆ ಹೊಸ ಮೆರುಗು:ಇದೇ ಮೊದಲ ಬಾರಿಗೆ ವಾರ್ ರೂಂ ಸ್ಥಾಪನೆ

ಈ ಬಾರಿಯ ಹಾಸನಾಂಬೆ ಉತ್ಸವಕೆ ಹೊಸ ಮೆರುಗು:ಇದೇ ಮೊದಲ ಬಾರಿಗೆ ವಾರ್ ರೂಂ ಸ್ಥಾಪನೆ

ಹೆಚ್ಚುವರಿ ಬಸ್ ವ್ಯವಸ್ಥೆ: ಅಲಂಕಾರಕ್ಕೆ ಹೆಚ್ಚಿನ ಒತ್ತು

ಹಾಸನ: ಈ ಬಾರಿಯ ಹಾಸನಾಂಬೆ ಉತ್ಸವಕೆ ಹೊಸ ಮೆರುಗು ನೀಡಲಾಗುತ್ತಿದ್ದು, ಭಕ್ತರು ಸೇರಿ ಯಾರಿಗೂ ತೊಂದರೆ, ಅನನುಕೂಲ ಆಗದಂತೆ ಜಾತ್ರೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮನವಿ ಮಾಡಿದರು.
ಇಂದು ಜಿಪಂ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಇತಿಹಾಸದಲ್ಲಿ ಉಳಿಯೋ ರೀತಿ ಜಾತ್ರಾ ಮಹೋತ್ಸವ ಆಗಬೇಕು ಎಂದರು.
ದೇವಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ನೆರಳು, ಕಾಲು ಮ್ಯಾಟ್, ಫ್ಯಾನ್, ಕುಡಿಯುವ ನೀರು ಜೊತೆಗೆ ಬ್ಯಾರಿಕೇಡ್ ಅಳವಡಿಸಬೇಕು. ಗರ್ಭಗುಡಿಯ ಪೂಜೆ ಎಲ್ಲರಿಗೂ ಕಾಣುವ ರೀತಿ ಇರಬೇಕು, ಎಲ್ಲೂ ಕೂಡ ನೂಕಾಟ,ಕಿರುಚಾಟ ಆಗಬಾರದು ಎಂದು ಸೂಚನೆ ನೀಡಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ಎಸಿ ಮಾರುತಿ, ದೇವಾಲಯದ ಪೇಂಟ್ ಹಾಗೂ ದುರಸ್ತಿ ಕಾರ್ಯ ಮುಗಿದಿದೆ, ಆಹ್ವಾನ ಪತ್ರಿಕೆ ಮುದ್ರಣವಾಗಿದ್ದು, ಸೋಮವಾರ ದಿಂದ ವಿತರಣೆ ಮಾಡಲಾಗುವುದು ಎಂದರು.
ಪೂಜಾ ವೇಳಾಪಟ್ಟಿ ಸಿದ್ಧವಾಗಿದೆ, ಪ್ರಚಾರದ ಪೋಸ್ಟರ್, ೨೪ ಗಂಟೆ ಪೂಜಾ ವ್ಯವಸ್ಥೆಗೆ ಯೋಜನೆ ಮಾಡಲಾಗಿದೆ, ಹೂವಿನ ಅಲಂಕಾರಕ್ಕೆ ಟೆಂಡರ್ ಮುಕ್ತಾಯ ಆಗಿದೆ ಎಂದು ಎಸಿ ವಿವರಿಸಿದರು.
ಕಳೆದ ಬಾರಿ ೨ ಇದ್ದ ಆರ್ಚ್ ಸಂಖ್ಯೆಯನ್ನು ಈ ಬಾರಿ ಐದಕ್ಕೆ ಹೆಚ್ಚಿಸಲಾಗುವುದು. ಸರ್ಕಾರಿ ಕಚೇರಿಗಳಿಗೆ ೧೫ ದಿನ ಲೈಟಿಂಗ್ ಹಾಕಿಸಲು ಸೂಚಿಸಲಾಗಿದೆ. ನೇರ ಪ್ರಸಾರಕ್ಕೆ ೮ ಎಲ್‌ಇಡಿ ಲೈಟ್ ಹಾಕಲಾಗುತ್ತಿದೆ. ವಿವಿಧೆಡೆ ೧೦೦ ಟಿವಿ ಅಳವಡಿಸಲು ಪ್ಲಾನ್ ಮಾಡಿದ್ದೇವೆ.
ಕಳೆದ ಬಾರಿ ೨೪ ಇದ್ದ ಶೌಚಾಲಯ ಸಂಖ್ಯೆಯನ್ನು ಈ ಸಲ ೫೦ಕ್ಕೆ ಹೆಚ್ಚಿಸಲಾಗಿದೆ ಎಂದು ಮಾರುತಿ ಮಾಹಿತಿ ನೀಡಿದರು. ಹಾಗೆಯೇ
೧೦.೮ ಕಿಮೀ ರನ್ನಿಂಗ್ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಈ ಬಾರಿ ಮಾಧ್ಯಮದವರು ಸೇರಿದಂತೆ ಅಧಿಕಾರಿಗಳಿಗೆ ಡಿಜಿಟಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು, ಸ್ಕಾö್ಯನ್ ಮಾಡಿ ದೇವಾಲಯದ ಗೇಟ್ ಒಳಗೆ ಬಿಡಲು ಖಾಸಗಿ ಏಜೆನ್ಸಿ ಬಳಸಿಕೊಳ್ಳಲಾಗುತ್ತಿದೆ. ಗರ್ಭಗುಡಿ ಮುಂಭಾಗ ಎಸಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕಳೆದ ಬಾರಿ ಊಟದಲ್ಲಿ ಸಮಸ್ಯೆಯಾಯಿತು ಎಂಬ ಕಾರಣಕ್ಕೆ ಈ ಸಲ ಜಿಲ್ಲಾಡಳಿತದಿಂದಲೇ ಸಿಬ್ಬಂದಿಗೆ ಊಟ, ಉಪಹಾರ ಮಾಡಲಾಗುತ್ತಿದ್ದು, ಬಿಸಿಎಂ ಇಲಾಖೆಗೆ ವಹಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಣ ಎಷ್ಟೇ ಖರ್ಚಾದರೂ ಊಟ, ಉಪಹಾರ ಉತ್ತಮವಾಗಿರಲಿ ಎಂದು ಸೂಚಿಸಿದರು.
ಗುಂಪು ಅಧ್ಯಯನ ಮಾಡಲು ಅಧಿಕಾರಿ ನಿಯೋಜಿಸಿ, ವಾಚ್ ಮಾಡಲು ಟೀಂ ಮಾಡಿಕೊಳ್ಳಿ ಎಂದು ಸಚಿವರು ಹೇಳಿದರು. ಗಣ್ಯರಿಗೆ ಅರ್ಚನೆ ಮಾಡಿರುವುದನ್ನು ಕಡಿಮೆ ಮಾಡಿ, ಆಗ ಒತ್ತಡ ಕಡಿಮೆ ಆಗಲಿದೆ, ಏಕೆಂದರೆ ಶಕ್ತಿ ಯೋಜನೆಯಿಂದಾಗಿ ಈ ಬಾರಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಅದಕ್ಕಾಗಿಯೇ ೨೪ ದರ್ಶನ ವ್ಯವಸ್ಥೆ ಮಾಡಲಾಗಿದೆ. ಬಂದವರು ಸಮಾಧಾನದಿಂದ ಹೋಗಬೇಕು ಎಂದು ಸಚಿವರು ಹೇಳಿದರು.
ಮುಂದುವರಿದು ಅಂಗವಿಕಲರು, ವೃದ್ಧರಿಗಾಗಿ ಎಲೆಕ್ಟಿçಕ್ ವಾಹನ ಬಳಕೆ ಮಾಡಲಾಗುತ್ತಿದೆ. ನೀರು ಮಜ್ಜಿಗೆ ವಿತರಣೆ ಜೊತೆಗೆ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಹೆಲಿ ಟೂರಿಸಂ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ. ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ಯಾಕೇಜ್ ಟೂರ್ ಮಾಡಲಾಗುತ್ತಿದೆ ಎಂದು ಎಸಿ ಹೇಳಿದರು. ಸಭೆಯಲ್ಲಿ ಎಸ್ಪಿ ಮೊಹಮದ್ ಸುಜೀತಾ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ ಇದ್ದರು.

ಜಿಲ್ಲಾಧಿಕಾರಿ ಸತ್ಯಭಾಮ ಸಿ. ಮಾತನಾಡಿ, ಸಿಸಿ ಕ್ಯಾಮೆರಾ ವಾಚಿಂಗ್ ಮಾಡಲು ವಾರ್ ರೂಂ ತೆರೆಯಲಾಗುತ್ತಿದೆ. ಅಲ್ಲಿಂದ ಮಾನಿಟರ್ ಮಾಡಲು, ಗುಂಪು ಜಗಳ ಕಂಡು ಹಿಡಿಯಲಾಗುವುದು. ಎಲ್ಲಾದ್ರೂ ಹೆಚ್ಚು ಕಡಿಮೆ ಆದ್ರೆ ಕೂಡಲೇ ಮೆಜೇಜ್ ಕೊಡಬಹುದು. ಹಾಗೆಯೇ ವಾಕಿ ಟಾಕಿ ವ್ಯವಸ್ಥೆ ಕೂಡ ಇರಲಿದೆ. ಮೊಬೈಲ್ ರೀಚ್ ಆಗದೇ ಇದ್ದಾಗ, ತಕ್ಷಣ ಮೆಸೇಜ್ ಪಾಸ್ ಸರ ಕಳವು, ಮಿಸ್ಸಿಂಗ್ ಇತ್ಯಾದಿ ಪ್ರಕರಣ ಪತ್ತೆ ಹಾಗೂ ತುರ್ತು ಮೆಸೇಜ್ ರವಾನೆ ಮಾಡಲು ಅನುಕೂಲ ಆಗಲಿದೆ ಎಂದರು.

ಹೆಚ್ಚುವರಿ ಬಸ್ ವ್ಯವಸ್ಥೆ:
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗಾಗಿ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಿಕೊಂಡಿದೆ. ಕಳೆದ ಬಾರಿ ೨೦ ಬಸ್ ಬಿಡಲಾಗಿತ್ತು. ಈ ಬಾರಿ ೫೦ ರಿಂದ ೧೦೦ ಬಸ್ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಸಹಾಯವಾಣಿ ತೆರೆಯಿರಿ, ಜನರಿಗೆ ಬಸ್ ಅವಶ್ಯಕತೆ ಇದ್ದಾಗ ಕಾಲ್ ಮಾಡಿದರೆ ತಕ್ಷಣ ಸ್ಪಂದಿಸಿ ಎಂದು ಸೂಚಿಸಿದರು.

ನಾನು ಇದ್ದಲ್ಲಿಗೇ ಅಧಿಕಾರಿಗಳನ್ನು ಕರೆಸಿಕೊಂಡು ಏನು ಮಾಡಬೇಕು ಎಂದು ಹಿಂದೆಯೇ ಸೂಚನೆ ನೀಡಿದ್ದೆ. ಅದರಂತೆ ಎಲ್ಲಾ ರೀತಿಯ ಪೂರ್ವ ಸಿದ್ಧತೆ ನಡೆದಿದೆ. ಹಾಸನಾಂಬ ಮಹೋತ್ಸವದ ಸಿದ್ಧತೆ ನನಗೆ ಸಮಾಧಾನ ತಂದಿದೆ. ಎಲ್ಲರ ಸಹಕಾರ ಇರಲಿ, ವಿಜೃಂಭಣೆಯಿAದ ಉತ್ಸವ ಆಚರಣೆಯಾಗಬೇಕು. ಯಾರಿಗೂ ತೊಂದರೆ ಆಗಬಾರದು.ಯಾವುದೇ ಸಲಹೆ ಇದ್ರೂ ಸ್ವೀಕಾರ ಮಾಡುತ್ತೇವೆ. ಅಧಿಕಾರಿಗಳೆಲ್ಲರೂ ಕ್ರಿಯಾಶೀಲವಾಗಿ ನಿಮ್ಮ ಮನೆಯ ಉತ್ಸವದ ರೀತಿ ತೊಡಗಿಸಿಕೊಳ್ಳಿ. ಈ ಮೂಲಕ ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡಿ. ಯಾರಿಗೂ ತೊಂದರೆ, ಅಸಮಾಧಾನ ಆಗದ ರೀತಿ ಎಲ್ಲರೂ ಸೇರಿ ಉತ್ಸವ ಯಶಸ್ವಿ ಮಾಡೋಣ.
-ಕೆ.ಎನ್.ರಾಜಣ್ಣ, ಉಸ್ತುವಾರಿ ಸಚಿವ

error: Content is protected !!