20.1 C
Munich
Home ಜಿಲ್ಲೆ ಹಾಸನ ಬೈಪಾಸ್ ರಸ್ತೆ ಒಂದು ತಿಂಗಳು ಬಂದ್: ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ವಾಹನಗಳಿಗೆ ಇಲ್ಲಿದೆ ಬದಲಿ...

ಹಾಸನ ಬೈಪಾಸ್ ರಸ್ತೆ ಒಂದು ತಿಂಗಳು ಬಂದ್: ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ವಾಹನಗಳಿಗೆ ಇಲ್ಲಿದೆ ಬದಲಿ ಮಾರ್ಗ

ಹಾಸನ: ನಗರದ ರಾಷ್ಟ್ರೀಯ ದಾರಿ 75ರ ಬೈಪಾಸ್ ನಲ್ಲಿನ ರಾಜೀವ್ ಇಂಜಿನಿಯರಿಂಗ್ ಕಾಲೇಜು ಸಮೀಪದ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾರ್ಯ ಆರಂಭವಾಗುವ ಹಿನ್ನೆಲೆಯಲ್ಲಿ ಮೇ 15 ರಿಂದ ಜೂನ್ 15 ರವರೆಗೆ ಬೈಪಾಸ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶದ ಪ್ರತಿ

ರಾಜೀವ್ ಕಾಲೇಜು ಬಳಿಯ ಮೇಲ್ಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಸೇತುವೆ ದುರಸ್ತಿಗೆ ಅವಕಾಶ ಮಾಡಿಕೊಡುವಂತೆ ನೈರುತ್ಯ ರೈಲ್ವೆ ಅಧಿಕಾರಿಗಳು ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ಸೇತುವೆ ದುರಸ್ತಿ ಕಾಮಗಾರಿಗೆ ಅನುವು ಮಾಡಿಕೊಟ್ಟಿದ್ದು, ಮೇ 14ರ ವರೆಗೆ ಬೈಪಾಸ್ ರಸ್ತೆಯಲ್ಲಿ ಕೇವಲ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದಾರೆ. ಆದರೆ ಕಾಮಗಾರಿ ಆರಂಭವಾಗಲಿರುವ ಮೇ 15 ರಿಂದ ಅದು ಮುಕ್ತಾಯಗೊಳ್ಳುವ ಜೂನ್ 15ರ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ

ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ವಾಹನಗಳು ದೇವರಾಯಪಟ್ಟಣ-ವಿಜಯನಗರ- ಬಡಾವಣೆ- ಸುಬೇದಾರ್ ನಾಗೇಶ್ ವೃತ್ತ- ಡೇರಿ ವೃತ್ತ-ಬೂವನಹಳ್ಳಿ ಕೂಡು ಬದಲಿ ಮಾರ್ಗದ ರಿಂಗ್ ರಸ್ತೆಯನ್ನು ಬಳಕೆ ಮಾಡಲು ಸೂಚಿಸಲಾಗಿದೆ.

error: Content is protected !!