ಚನ್ನರಾಯಪಟ್ಟಣ: ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದಯಾನಂದ್ ಶೆಟ್ಟಿಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಆಯ್ಕೆ

Dayanand Shettihalli has been elected as the president and R. Srinivas Ullavalli as the general secretary of the Channarayapatna Taluk Working Journalists' Association for the next three-year term in the elections held.

ಚನ್ನರಾಯಪಟ್ಟಣ: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಸ್ಥಾನಕ್ಕೆ ಇಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದಯಾನಂದ್ ಶೆಟ್ಟಿಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಆಯ್ಕೆ ಆಗಿದ್ದಾರೆ.

ಖಜಾಂಚಿ, ಉಪಾಧ್ಯಕ್ಷ ಸ್ಥಾನ 2, ಸಹ ಕಾರ್ಯದರ್ಶಿ 2 ಸ್ಥಾನ ಹಾಗೂ 4 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಾತ್ರ ಚುನಾವಣೆ ಪ್ರಕ್ರಿಯೆ ನಡೆಯಿತು.

ಸಂಘವು 19 ಸದಸ್ಯರ ಬಲ ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ದಯಾನಂದ್ ಶೆಟ್ಟಿಹಳ್ಳಿ ಹಾಗೂ ಶಾಮ್ ಸುಂದರ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆರ್‌.ಶ್ರೀನಿವಾಸ್ ಉಳ್ಳಾವಳ್ಳಿ ಮತ್ತು ಲೋಹಿತ್ ನಾಮಪತ್ರ ಸಲ್ಲಿಸಿದ್ದರು.

ಮತದಾನ ನಡೆದು ಅಂತಿಮವಾಗಿ 10 ಮತಗಳೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ದಯಾನಂದ್ ಶೆಟ್ಟಿಹಳ್ಳಿ ಹಾಗೂ 11 ಮತಗಳೊಂದಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆರ್. ಶ್ರೀನಿವಾಸ್ ಉಳ್ಳಾವಳ್ಳಿ ಗೇಲುವು ಸಾಧಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ನಂದನ್ ಪುಟ್ಟಣ್ಣ, ಕೆ.ಪಿ.ಪುಟ್ಟರಾಜು, ಸಹ ಕಾರ್ಯದರ್ಶಿಯಾಗಿ ಜೈ ಕುಮಾರ್, ನಾಗೇಂದ್ರ ರಾಯ, ಖಜಾಂಚಿ ಎ.ಎಲ್. ನಾಗೇಶ್, ನಿರ್ದೇಶಕರಾಗಿ ಎ.ಎಂ.ಜಯರಾಮ್, ನಟೇಶ್.ಎ, ಪಾಂಡುರಂಗ ಮತ್ತು ವೆಂಕಟಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೆಲುವು ಸಾಧಿಸಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ದಯಾನಂದ್ ಶೆಟ್ಟಿಹಳ್ಳಿ ಹಾಗೂ ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಹಾಗೂ ಎಲ್ಲಾ ಪದಾಧಿಕಾರಿಗಳನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.

ಚುನಾವಣಾ ಅಧಿಕಾರಿಗಳಾಗಿ ಹಿರೀಸಾವೆ ಪ್ರತಾಪ್ ಮತ್ತು ಕೃಷ್ಣ ಹಿಬ್ಬೀಡು ಅವರು ಕರ್ತವ್ಯ ನಿರ್ವಹಿಸುತ್ತಿದರು. ನಿಕಟಪೂರ್ವ ಅಧ್ಯಕ್ಷ ಸಿದ್ದರಾಜ್, ಸದಸ್ಯರಾದ ಮಂಜುನಾಥ್ ಹಂಚಿಹಳ್ಳಿ, ಪ್ರದೀಪ್, ಗೋವಿಂದ, ಗೋವಿಂದರಾಜು ಹಾಗೂ ಇತರರು ಇದ್ದರು.