ಚನ್ನರಾಯಪಟ್ಟಣ: ತಾಲ್ಲೂಕಿನ ಜೋಗಿಪುರ ಗ್ರಾಮದಲ್ಲಿ ಸಮುದಾಯ ಭವನ ಉದ್ಘಾಟನೆ ವಿಚಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತರ ನಡುವೆ ಘರ್ಷಣೆ ಉಂಟಾಗಿ ಶಾಸಕರ ಎದುರಿನಲ್ಲೇ ಪರಸ್ಪರ ತಳ್ಳಾಟ ನಡೆಯಿತು. ಪರಿಸ್ಥಿತಿ ಕೈಮೀರುವ ಮುನ್ನ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಉದ್ಘಾಟನೆ ಕಾರ್ಯಕ್ರಮಕ್ಕೆ ಸೋಮವಾರ ದಿನಾಂಕ ನಿಗದಿಯಾಗಿದ್ದರಿಂದ ಜೋಗಿಪುರ ಗ್ರಾಮದಲ್ಲಿ ಸಮುದಾಯ ಭವನ ಉದ್ಘಾಟನೆ ಮಾಡಲು ಶಾಸಕ ಸಿ.ಎನ್.ಬಾಲಕೃಷ್ಣ ಆಗಮಿಸಿದ ವೇಳೆ ಗ್ರಾಮದ ಕಾಂಗ್ರೆಸ್ ಮುಖಂಡರು ತಡೆಹಿಡಿಯಲು ಪ್ರಯತ್ನಿಸಿದರು.
ಶಾಸಕರು ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದಾಗ, ಕಾಮಗಾರಿ ಪೂರ್ಣಗೊಂಡಿಲ್ಲ. ಪೂರ್ಣಗೊಂಡಿರುವ ಇಲಾಖೆಯ ಪತ್ರ ಕೊಡಿ ಎಂದು ತಾಕೀತು ಮಾಡಿದ ಸಂದರ್ಭದಲ್ಲಿ ನೂಕಾಟ- ತಳ್ಳಾಟ ನಡೆದು ಮಾತಿನ ಚಕಮಕಿ ನಡೆಯಿತು.
ವಿರೋಧದ ನಡುವೆಯೂ ಅಂತಿಮವಾಗಿ ಶಾಸಕರು ದೀಪ ಬೆಳಗುವ ಮೂಲಕ ಉದ್ಘಾಟನೆ ನೆರವೇರಿಸಿದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಉದ್ಘಾಟನಾ ಫಲಕವನ್ನು ಒಡೆದು ಹಾಕುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಶಾಸಕರು ಉದ್ಘಾಟನೆ ನಂತರ ಶೌಚಾಲಯ ಹಾಗೂ ವಿದ್ಯುತ್ ಪಟ್ಟಿ ಅಳವಡಿಕೆ ಬಗ್ಗೆ ತಿಳಿಸಿದ್ದೀರಿ ಕೂಡಲೇ ಅದನ್ನು ನೆರವೇರಿಸಲಾಗುತ್ತದೆ ಇದು ದೇವೇಗೌಡರ ಅನುದಾನ ಹಾಗೂ ಶಾಸಕರ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಗೊಂಡಿದೆ ಎಂದರು.
ಒಬ್ಬರಿಗೊಬ್ಬರು ಆರೋಪ- ಪ್ರತ್ಯಾರೋಪ ಮಾಡುವ ಸಂದರ್ಭದಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಜೋಗಿಪುರದಲ್ಲಿ ಹಿಂದಿನಿಂದಲೂ ಕೆಲವು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಇದೇ ರೀತಿ ಘರ್ಷಣೆಗಳು ನಡೆಯುತ್ತಾ ಬಂದಿವೆ. ಕಳೆದ ಐದು ವರ್ಷದ ಹಿಂದೆ ಹಾಲು ಉತ್ಪಾದಕರ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಕೂಡ ಕೈ ಕೈ ಮಿಲಾಯಿಸಿ ಘರ್ಷಣೆ ಮಾಡಿಕೊಂಡಿದ್ದರು ಎಂದು ಮಹಿಳೆಯರು ಗಲಾಟೆ ಮಾಡುತ್ತಿದ್ದವರಿಗೆ ಗ್ರಾಮದ ಅಭಿವೃದ್ಧಿಯನ್ನು ಯೋಚಿಸದೇ ಕಿತ್ತಾಡಿಕೊಂಡು ಗ್ರಾಮ ಹಿಂದುಳಿಯಲು ಕಾರಣರಾಗುತ್ತಿದ್ದಾರೆ ಎಂದು ಗಲಾಟೆ ನೇತೃತ್ವ ವಹಿಸುತ್ತಿದ್ದವರ ಮೇಲೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
Channarayapatna: A clash broke out between JDS and Congress supporters over the inauguration of a community hall in Jogipur village of the taluk, resulting in a scuffle in front of the MLAs. The police intervened and calmed the situation before it got out of hand.










