ಹಾಸನ: ಬ್ರೇನ್ ಟ್ಯೂಮರ್ ಮಾರಣಾಂತಿಕ ಅಲ್ಲ ಅತ್ಯಾಧುನಿಕ ಚಿಕಿತ್ಸೆ ಮಣಿಪಾಲ್ ಆಸ್ಪತ್ರೆಯಲ್ಲಿ ಲಭ್ಯ: ಡಾ.ಅನ್ಮೋಲ್

Brain tumors are no longer fatal, and Manipal Hospital in Yeshwantpur, Bengaluru, is fully prepared for this negative mindset shift, said Dr. Anmol, Senior Consultant Neurosurgeon and Spine Surgeon.

ಹಾಸನ: ಬ್ರೇನ್ ಟ್ಯೂಮರ್(ಮೆದುಳುಗೆಡ್ಡೆ) ಈಗ ಮಾರಣಾಂತಿಕವಲ್ಲ, ಈ ನಕಾರಾತ್ಮಕ ಮನೋಭಾವದ ಬದಲಾವಣೆಗೆ ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆ ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದೆ ಎಂದು ಸೀನಿಯರ್ ಕನ್ಸಲ್ಟೆಂಟ್ ನ್ಯೂರೋ ಸರ್ಜನ್ ಮತ್ತು ಸ್ಪೈನ್ ಸರ್ಜನ್ ಡಾ.ಅನ್ಮೋಲ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯು ಆಣಿಕ ರೋಗ ನಿರ್ಣಯ, ವೈಯಕ್ತಿಕಗೊಳಿಸಿದ ಚಿಕಿತ್ಸೆ, ಸ್ಟೀರಿಯೊಟ್ಯಾಕ್ಟಿಕ್ ರೇಡಿಯೋಸರ್ಜರಿ, ಲೇಸರ್ ಇಂಟರ್ ಸ್ಟ್ರೀಷಿಯಲ್ ಥೆರಪಿ ಮುಂತಾದ ತಂತ್ರಜ್ಞಾನದೊಂದಿಗೆ ಒಂದೇ ಸೂರಿನಡಿ ಸಂಪೂರ್ಣ ನರ-ಆಂಕೋಲಜಿ ಆರೈಕೆ ಒದಗಿಸುತ್ತಿದೆ ಎಂದರು.

ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಬೇಕಿಲ್ಲ. ಕರ್ನಾಟಕದಲ್ಲೇ ವಿಶ್ವದರ್ಜೆಯ ಚಿಕಿತ್ಸೆ ನಮ್ಮ ಗುರಿ ಸರಳ, ಆರಂಭಿಕ ರೋಗ ನಿರ್ಣಯ, ಸುರಕ್ಷಿತ ಶಸ್ತ್ರ ಚಿಕಿತ್ಸೆಗಳು ಮತ್ತು ಚುರುಕಾದ
ಚಿಕಿತ್ಸಾ ವಿಧಾನಗಳಿಂದ ರೋಗಿಗಳನ್ನು ಸಾಧ್ಯವಾದಷ್ಟು ಬೇಗ ಸಾಮಾನ್ಯ ಜೀವನಕ್ಕೆ ಮರಳಿಸುವುದು. ಈಗ ಮೇಲುಸ್ತರದ ನರ-ಆಂಕೋಲಜಿ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುವ ಅಗತ್ಯವಿಲ್ಲ, ಕರ್ನಾಟಕದಲ್ಲೇ ವಿಶ್ವದರ್ಜೆಯ ಸೌಲಭ್ಯ ಲಭ್ಯ ಎಂದು ಆತ್ಮವಿಶ್ವಾಸದಿಂದ ಹೇಳಿದರು.

ಯಾವುದೇ ರೀತಿಯ ಅಸಹಜ ಬದಲಾವಣೆ ಕಂಡರೂ ನಿರ್ಲಕ್ಷಿಸದೇ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಜೀವ ಉಳಿಸುವ ಅತ್ಯಂತ ಪ್ರಮುಖ ಹೆಜ್ಜೆ ಎಂದು ಸಲಹೆ ನೀಡಿದರು.

ಮೆದುಳು ಗೆಡ್ಡೆ ಇಂದಿನ ವೈದ್ಯಕೀಯ ತಂತ್ರಜ್ಞಾನ, ನಿಖರ ಶಸ್ತ್ರ ಚಿಕಿತ್ಸೆ ಹಾಗೂ ವೈಯಕ್ತಿಕ ಚಿಕಿತ್ಸಾ ವಿಧಾನಗಳ ಮೂಲಕ ಪ್ರಗತಿಯೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಮತ್ತು ಚಿಕಿತ್ಸೆ ನೀಡಬಹುದಾಗಿದೆ.

ಆದರೆ ಭಯ, ತಡವಾದ ರೋಗ ನಿರ್ಧಾರ ಹಾಗೂ ರೋಗದ ಬಗ್ಗೆ ತಪ್ಪು ಗ್ರಹಿಕೆಗಳು, ವಿಶೇಷವಾಗಿ ಟಿಯರ್-2, ಟಿಯರ್-3 ನಗರಗಳಲ್ಲಿ ಸಮಯೋಚಿತ ಚಿಕಿತ್ಸೆಗೆ ನಮ್ಮ ಆಸ್ಪತ್ರೆಗೆ ಬದ್ಧವಾಗಿದೆ ಎಂದರು.

ಇಂದಿನ ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ಅನೇಕ ಬ್ರೇನ್ ಟ್ಯೂಮರ್‌ಗಳನ್ನು ಸಂಪೂರ್ಣವಾಗಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸುವುದು, ಚಿಕಿತ್ಸಿಸುವುದು ಸಾಧ್ಯವಾಗಿದೆ. ನರಮಂಡಲದ ಯಾವುದೇ ಸಮಸ್ಯೆಯನ್ನು ಸಾಮಾನ್ಯ ಅಥವಾ ಕ್ಷುಲ್ಲಕವೆಂದು ನಿರ್ಲಕ್ಷಿಸದೇ ತಕ್ಷಣ ತಜ್ಞರ ನೆರವು ಪಡೆಯುವುದು ಅತ್ಯಂತ ಮುಖ್ಯ ಎಂದರು.

ಎಚ್ಚರಿಕೆ ಸೂಚನೆಗಳ ಕಡೆ ಗಂಭೀರ ಗಮನ ಅಗತ್ಯ. ಅವುಗಳನ್ನು ಒತ್ತಡ, ಜೀವನಶೈಲಿ ಅಥವಾ ಸಾಮಾನ್ಯ ಸಮಸ್ಯೆಗಳೆಂದು ತಪ್ಪಾಗಿ ಅರ್ಥೈಸುವುದೇ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ. ಮುಂಜಾನೆ ಹೆಚ್ಚಿನ ತಲೆನೋವು, ಕಾರಣವಿಲ್ಲದ ವಾಂತಿ, ಹಠಾತ್ ದೃಷ್ಟಿ ಸಮಸ್ಯೆಗಳು, ವಿವರಿಸಲಾಗದ ಅಸ್ವಸ್ಥತೆಗಳು, ನಡೆ-ನುಡಿಗಳ ಬದಲಾವಣೆ, ಅಸಮತೋಲನ ಮತ್ತು ಕೈಕಾಲುಗಳಲ್ಲಿ ದೌರ್ಬಲ್ಯ, ಈ ಚಿಹ್ನೆಗಳನ್ನು ಆರೈಕೆಯಿಲ್ಲದೆ ಬಿಟ್ಟಲ್ಲಿ ರೋಗ ತೀವ್ರಗೊಳ್ಳಬಹುದು. ಆರಂಭಿಕ ಪರೀಕ್ಷೆಗಳು ಉತ್ತಮ ಫಲಿತಾಂಶಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಹೇಳಿದರು.

ಸುಧಾರಿತ ತಂತ್ರಜ್ಞಾನ-ಜೀವಿತಾವಧಿ ಉಳಿಸುವ ಶಸ್ತ್ರಚಿಕಿತ್ಸೆಯನ್ನು ಮಣಿಪಾಲ್ ಆಸ್ಪತ್ರೆ ಯಶವಂತಪುರದಲ್ಲಿ ನ್ಯೂರೋ-ನ್ಯಾವಿಗೇಷನ್, ಇಂಟ್ರಾ ಆಪರೇಟಿವ್ ಅಲ್ಟ್ರಾಸೌಂಡ್, ಇಂಟ್ರಾ ಆಪರೇಟಿವ್ ನ್ಯೂರೋ ಮಾನಿಟರಿಂಗ್, ಹೈ-ಎಂಡ್ ಮೈಕ್ರೋಸ್ಕೋಪ್‌ಗಳು, ಎಂಡೋ ಸ್ಕೋಪ್‌ಗಳು, ಎಕ್ಕೋಸ್ಕೋಪ್‌ಗಳು ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳಿವೆ.

ಈ ತಂತ್ರಜ್ಞಾನಗಳ ನೆರವಿನಿಂದ ಮೆದುಳಿನ ಅತಿ ಸೂಕ್ಷ್ಮ ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿರುವ ಗೆಡ್ಡೆಗಳನ್ನು ಗರಿಷ್ಠ ನಿಖರತೆಯಿಂದ ಹಾಗೂ ಕಡಿಮೆ ಅಪಾಯದೊಂದಿಗೆ
ಶಸ್ತ್ರಚಿಕಿತ್ಸೆ ಮಾಡುವುದು ಸಾಧ್ಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.