1.4 C
Munich
Home News ಚನ್ನರಾಯಪಟ್ಟಣ: ಹೆದ್ದಾರಿಯಲ್ಲಿ ಬೈಕ್–ಕಾರು ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ

ಚನ್ನರಾಯಪಟ್ಟಣ: ಹೆದ್ದಾರಿಯಲ್ಲಿ ಬೈಕ್–ಕಾರು ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ

biker died on the spot in a tragic road accident near Hirisave on Sunday evening.

ಚನ್ನರಾಯಪಟ್ಟಣ : ತಾಲ್ಲೂಕಿನ ಹಿರೀಸಾವೆ ಬಳಿಯಲ್ಲಿ ನಡೆದ ದುರಂತ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ಮೃತನನ್ನು ಕಟ್ಟೆಗಹಳ್ಳಿ ಗ್ರಾಮದ ಸುರೇಶ್ (51) ಎಂದು ಗುರುತಿಸಲಾಗಿದೆ. ಅವರು ಬೂಕನ ಬೆಟ್ಟಕ್ಕೆ ಜನ್ಮದಿನ ಕಾರ್ಯಕ್ರಮಕ್ಕೆ ಹೋಗಿ ಊಟ ಮುಗಿಸಿಕೊಂಡು ಬೈಕ್‌ನಲ್ಲಿ ತಿರುಗಿ ಬರುತ್ತಿದ್ದ ವೇಳೆ ಕಾರೊಂದು ಎದುರಿನಿಂದ ಬಂದು ಭೀಕರವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಅಪಘಾತದ ನಂತರ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಹಿರಿಸಾವೆ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾಗಿರುವ ಚಾಲಕನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

 

biker-died-on-the-spot-in-a-tragic-road-accident-near-hirisave-on-sunday-evening

error: Content is protected !!