ಬೆಂಗಳೂರು: ರಾತ್ರೋರಾತ್ರಿ ಮಿಡ್‌ ವೀಕ್‌ ಎಲಿಮಿನೇಶನ್‌ ಆಗ್ತಾರೆ? ಧನುಷ್‌ ಗೌಡ ಹೇಳೇಬಿಟ್ರು!

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಗ್ರ್ಯಾಂಡ್‌ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಈಗ ದೊಡ್ಮನೆಯಲ್ಲಿ ಟಾಪ್‌ 5 ಸ್ಪರ್ಧಿಗಳು ಮಾತ್ರ ಉಳಿದಿದ್ದು, ಮಿಡ್‌ ವೀಕ್‌ ಎಲಿಮಿನೇಶನ್‌ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಯಾರು ಮನೆಯಿಂದ ಹೊರಹೋಗಬಹುದು ಎಂಬ ಚರ್ಚೆ ಜೋರಾಗಿದೆ.

ಕಿಚ್ಚ ಸುದೀಪ್‌ ಅವರ ಕೊನೆಯ ಕಿಚ್ಚನ ಪಂಚಾಯಿತಿ ಹಾಗೂ ಸಂಡೇ ವಿತ್‌ ಸುದೀಪ್ ಎಪಿಸೋಡ್‌ಗಳ ಬಳಿಕ, ರಾಶಿಕಾ ಶೆಟ್ಟಿ ಎಲಿಮಿನೇಶನ್‌ ಆಗಿದ್ದಾರೆ. ಇದರ ನಂತರ ಧನುಷ್‌ ಗೌಡ ಹಾಗೂ ಕಾವ್ಯ ಶೈವ ಅವರು ಬೆಡ್‌ ರೂಮ್‌ ಏರಿಯಾದಲ್ಲಿ ನಡೆಸಿದ ಮಾತುಕತೆ ಗಮನ ಸೆಳೆದಿದೆ.

ಧನುಷ್‌–ಕಾವ್ಯ ನಡುವಿನ ಸಂಭಾಷಣೆ

ಧನುಷ್‌ ಗೌಡ: ಹೋಗು, ಡ್ರೆಸ್‌ ಚೇಂಜ್‌ ಮಾಡು. ಮಿಡ್‌ ವೀಕ್‌ ಕಳಿಸ್ತಾರೆ, ರೆಡಿ ಆಗು
ಕಾವ್ಯ ಶೈವ: ಹೋಗಲ್ಲ
ಧನುಷ್‌ ಗೌಡ: ಹೋಗು
ಕಾವ್ಯ ಶೈವ: ನಾನು ಇಲ್ಲಿ ಕೂತರೆ ನಿನಗೆ ಏನು ಸಮಸ್ಯೆ?
ಧನುಷ್‌ ಗೌಡ: ಖುಷಿಯಿಂದ ಕಳಿಸಿಕೊಡ್ತೀನಿ
ಕಾವ್ಯ ಶೈವ: ನಾನು ಯಾವಾಗಲೂ ರೆಡಿ ಇದ್ದೀನಿ, ಯಾವಾಗ ಬೇಕಿದ್ರೂ ಕಳಿಸಬಹುದು

ಇದೇ ವೇಳೆ ಕಿಚ್ಚ ಸುದೀಪ್‌ ಅವರು, ಗಿಲ್ಲಿ ನಟ ಹಾಗೂ ರಕ್ಷಿತಾ ಹೊರತುಪಡಿಸಿ ಕಾವ್ಯ ಶೈವ ಎಲ್ಲಿಯೂ ಕಾಣಿಸಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದರು. ಗಿಲ್ಲಿ ನಟ ಹಾಗೂ ಕಾವ್ಯ ಶೈವ ಅಕ್ಕ–ಪಕ್ಕ ಕುಳಿತುಕೊಳ್ಳುವ ವಿಚಾರವೂ ಪ್ರಸ್ತಾಪಕ್ಕೆ ಬಂದಿದೆ. ಈ ಎಲ್ಲ ಬೆಳವಣಿಗೆಗಳಿಂದ ಕಾವ್ಯ ಶೈವ ಡಲ್‌ ಆಗಿದ್ದು, ಧನುಷ್‌ ಬಳಿ ತಮ್ಮ ನೋವನ್ನು ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

ಕಾವ್ಯ ಶೈವ ಆಟ ಹೇಗಿತ್ತು?

ಟಾಪ್‌ 5 ಸ್ಪರ್ಧಿಗಳಲ್ಲಿ ಒಬ್ಬರು ಮಿಡ್‌ ವೀಕ್‌ ಎಲಿಮಿನೇಶನ್‌ಗೆ ಗುರಿಯಾಗಲಿದ್ದಾರೆ. ಮಧ್ಯರಾತ್ರಿ ಎಲಿಮಿನೇಶನ್‌ ನಡೆಯಲಿದೆ ಎನ್ನಲಾಗುತ್ತಿದೆ. ಈ ನಡುವೆ ಕಾವ್ಯ ಶೈವ ಅವರು ಹೆಚ್ಚಿನ ಟಾಸ್ಕ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ, ಅಡುಗೆ ವಿಷಯದಲ್ಲೂ ಹಿಂದುಳಿದಿದ್ದರು ಎಂಬ ಮಾತು ಕೇಳಿಬರುತ್ತಿದೆ. ಗಿಲ್ಲಿ ನಟನ ವಿಚಾರವಾಗಿ ಅವರ ಹೆಸರು ಹೆಚ್ಚು ಕೇಳಿಬಂದಿದ್ದು ಗಮನಾರ್ಹ.

ಗಿಲ್ಲಿ ನಟ ಕೂಡ ಔಟ್‌?

ಇನ್ನೊಂದೆಡೆ, ಗಿಲ್ಲಿ ನಟ ಕೂಡ ಕಾವ್ಯ ಶೈವ ಮಿಡ್‌ ವೀಕ್‌ ಎಲಿಮಿನೇಶನ್‌ನಲ್ಲಿ ಔಟ್‌ ಆಗುತ್ತಾರೆ ಎಂಬ ಅರ್ಥದಲ್ಲಿ ಮಾತನಾಡಿದ್ದಾಗಿ ತಿಳಿದುಬಂದಿದೆ. ಇತ್ತೀಚೆಗೆ ಗಿಲ್ಲಿ ಮತ್ತು ಕಾವ್ಯ ನಡುವೆ ಸಣ್ಣ ಮನಸ್ತಾಪ ಉಂಟಾಗಿದ್ದು, ಈ ವೇಳೆ ಗಿಲ್ಲಿ ನಟ ಅವರು ಟಾಂಟ್‌ ಮಾಡಿದ ಪ್ರಸಂಗವೂ ನಡೆದಿದೆ.

ಗ್ರ್ಯಾಂಡ್‌ ಫಿನಾಲೆ ಯಾವಾಗ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗ್ರ್ಯಾಂಡ್‌ ಫಿನಾಲೆ ಜನವರಿ 17 ಮತ್ತು 18ರಂದು ನಡೆಯಲಿದೆ ಎನ್ನಲಾಗಿದೆ. ಟ್ರೋಫಿ ಯಾರ ಕೈ ಸೇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.