ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ನಟಿ ಪವಿತ್ರಾ ಗೌಡ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಗಳು ಖುಷಿ ಗೌಡ ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ತಾಯಿಯ ಫೋಟೋ ಹಂಚಿಕೊಂಡಿರುವ ಖುಷಿ, “ಹ್ಯಾಪಿ ಬರ್ತಡೇ ಮೈ ಫಾರೆವರ್ ಕ್ಯೂಟಿ” ಎಂದು ಶುಭಾಶಯ ಕೋರಿದ್ದಾರೆ.
ಸಮಯ ಎಷ್ಟು ವೇಗವಾಗಿ ಹಾರಿ ಹೋಗುತ್ತಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ನಿನ್ನ ಜೊತೆ ಕಳೆದ ಸಮಯ ತುಂಬಾ ಕಡಿಮೆ ಎಂಬುದೇ ನನ್ನ ಮನಸ್ಸನ್ನು ನೋಯಿಸುತ್ತಿದೆ ಎಂದು ಪೋಸ್ಟ್ನಲ್ಲಿ ಭಾವನೆ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ತಾಯಿ ಪವಿತ್ರಾ ಗೌಡ ಅವರ ಚಿತ್ರವನ್ನು ಹಂಚಿಕೊಂಡು ಮಗಳು ಖುಷಿ ಗೌಡ ಈ ಮೂಲಕ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.










