ಬೆಂಗಳೂರು: ಮಿಲನ ಸಿನಿಮಾ ಖ್ಯಾತಿ ನಟಿ ಪಾರ್ವತಿ ತಮ್ಮ ಜೀವನದ ಮೊದಲ ಡೇಟಿಂಗ್ ಆ್ಯಪ್ ಅನುಭವವನ್ನು ಬಹಿರಂಗಪಡಿಸಿದ್ದಾರೆ. 2021ರ ಬ್ರೇಕ್‌ಅಪ್ ಬಳಿಕ ಮೂರು ವರ್ಷಗಳ ಕಾಲ ಸಿಂಗಲ್ ಆಗಿದ್ದ ಪಾರ್ವತಿ, ಲಾಸ್ ಏಂಜಲೀಸ್ ಪ್ರವಾಸದ ವೇಳೆ ಡೇಟಿಂಗ್ ಆ್ಯಪ್ ಪ್ರಯೋಗಿಸಿದ್ದು, ಆ ಅನುಭವವೇ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಸ್ನೇಹಿತೆಯ ಸಲಹೆ, ಡೇಟಿಂಗ್ ಆ್ಯಪ್ ಡೌನ್‌ಲೋಡ್
ಲಾಸ್ ಏಂಜಲೀಸ್‌ನಲ್ಲಿ ಕೆಲಸದ ನಿಮಿತ್ತ ಇದ್ದ ವೇಳೆ, ಸ್ನೇಹಿತೆಯೊಬ್ಬರ ಸಲಹೆ ಮೇರೆಗೆ ಬಂಬಲ್, ರಾಯ ಮತ್ತು ಫೀಲ್ಡ್ ಎಂಬ ಡೇಟಿಂಗ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡೆ ಎಂದು ಪಾರ್ವತಿ ಹೇಳಿದ್ದಾರೆ. ಡೇಟಿಂಗ್ ಆ್ಯಪ್‌ನಲ್ಲಿ ಚಾಟಿಂಗ್ ಮಾಡುವುದು ನನಗೆ ಇಷ್ಟವಿಲ್ಲ. ಹೀಗಾಗಿ ನೇರವಾಗಿ ಕಾಫಿಗೆ ಆಹ್ವಾನಿಸಿದ್ದೆ ಎಂದು ಹೇಳಿದ್ದಾರೆ.
“ಮೂರು ದಿನ ಮಾತ್ರ ಸಮಯ” – ಸ್ಪಷ್ಟ ಸಂದೇಶ
ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿ ಮೊದಲು ಚಾಟ್ ಮಾಡಲು ಸೂಚಿಸಿದ್ದ. ಆದರೆ ನನಗೆ ಸಮಯ ಇರಲಿಲ್ಲ. ಮೂರು ದಿನಗಳಲ್ಲಿ ಭಾರತಕ್ಕೆ ವಾಪಸ್ ಹೋಗುತ್ತೇನೆ. ಭೇಟಿಯಾಗಬೇಕೋ ಬೇಡವೋ ಬೇಗ ಹೇಳು ಎಂದು ನೇರವಾಗಿ ಮೆಸೇಜ್ ಮಾಡಿದ್ದೆ ಎಂದು ಪಾರ್ವತಿ ಹೇಳಿದ್ದಾರೆ.
ಕಾಫಿ ಡೇಟ್‌ನಿಂದ ಸಿನಿಮಾ ತನಕ
ಆ ವ್ಯಕ್ತಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಹಾಗೂ ಇಂಜಿನಿಯರ್ ಆಗಿದ್ದ. ಫೋಟೋ ಕೇಳಿದ್ದಕ್ಕೆ ನನ್ನ ಚಿತ್ರ ಕಳುಹಿಸಿದೆ. ಆತ ಅಮೆರಿಕನ್ ಆಗಿದ್ದ. ಖಾಸಗಿ ಸ್ಥಳಕ್ಕಿಂತ ಸಾರ್ವಜನಿಕ ಸ್ಥಳವೇ ಸುರಕ್ಷಿತ ಎಂದು ಸಿನಿಮಾಗೆ ಹೋಗೋಣ ಎಂದು ನಾನು ಸೂಚಿಸಿದ್ದೆ. ಅದರಂತೆ ‘ಕೈಂಡ್ಸ್ ಆಫ್ ಕೈಂಡ್‌ನೆಸ್’ ಸಿನಿಮಾ ನೋಡಿದೆವು. ಮೊದಲ ಡೇಟ್‌ಗೆ ಅದಕ್ಕಿಂತ ವಿಚಿತ್ರ ಸಿನಿಮಾ ಮತ್ತೊಂದಿಲ್ಲ ಎಂದು ಪಾರ್ವತಿ ನಗೆಚಟಾಕಿ ಹಾಕಿದ್ದಾರೆ.
“ಅಂದು ಪಿರಿಯಡ್ಸ್… ಆದರೂ ಡೇಟ್ ಎಂಜಾಯ್”
ಆ ದಿನ ಪಿರಿಯಡ್ಸ್ ಇದ್ದ ಕಾರಣ ತುಂಬಾ ಸುಸ್ತಾಗಿತ್ತು. ಮಾಲ್‌ನಲ್ಲಿ ಕಾಯುತ್ತಾ ಹಾಟ್ ಚಾಕೊಲೇಟ್ ಕುಡಿದೆ. ಅವನು ಕನ್ನಡಕ ಹಾಕಿಕೊಂಡಿದ್ದ, ‘ಫ್ರೆಂಡ್ಸ್’ ಸೀರಿಸ್‌ನ ರಿಚರ್ಡ್‌ನಂತೆ ಕಾಣುತ್ತಿದ್ದ ಎಂದು ಪಾರ್ವತಿ ಆ ಅನಾಮಿಕ ವ್ಯಕ್ತಿಯನ್ನು ವರ್ಣಿಸಿದ್ದಾರೆ.
ಎಂಟು ಗಂಟೆಗಳ ಒಟ್ಟಿನ ಸಮಯ
ಕಾಫಿ, ಸಿನಿಮಾ, ಮಾತುಕತೆ… ಚಾಟಿಂಗ್ ಇಲ್ಲದೆ ನೇರವಾಗಿ ಡೇಟಿಂಗ್ ಆರಂಭವಾಯಿತು. ನಾವು ಎಂಟು ಗಂಟೆಗಳ ಕಾಲ ಒಟ್ಟಿಗೆ ಕಾಲ ಕಳೆದೆವು. ನಂತರ ಅವನು ನನ್ನನ್ನು ಹೋಟೆಲ್‌ಗೆ ಡ್ರಾಪ್ ಮಾಡಿದ. ಇದೇ ಮೊದಲ ಬಾರಿಗೆ ಯಾರೋ ಒಬ್ಬರು ನನ್ನನ್ನು ಡೇಟ್‌ಗೆ ಕರೆದುಕೊಂಡು ಹೋಗಿದ್ದರು. ನಾನು ಆ ಕ್ಷಣಗಳನ್ನು ತುಂಬಾ ಎಂಜಾಯ್ ಮಾಡಿದೆ ಎಂದು ಹೌಟರ್‌ಫ್ಲೈಗೆ ನೀಡಿದ ಸಂದರ್ಶನದಲ್ಲಿ ಪಾರ್ವತಿ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ
ಪಾರ್ವತಿಯ ಈ ಡೇಟಿಂಗ್ ಅನುಭವಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಬ್ರೇಕ್‌ಅಪ್‌ನಿಂದ ಹೊರಬರಲು ಇದು ಸರಿಯಾದ ಮಾರ್ಗವಲ್ಲ ಎಂದು ಟೀಕಿಸಿದ್ದಾರೆ.










