ಬೆಂಗಳೂರು : ಚಿನ್ನದ ದರ ಸಾರ್ವಕಾಲಿಕ ದಾಖಲೆ – ಚಿನ್ನ ಹಾಗೂ ಬೆಳ್ಳಿ ದರ ಕಂಡು ಬೆಚ್ಚಿಬಿದ್ದ ಗ್ರಾಹಕರು

ಬೆಂಗಳೂರು : ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಗುರುವಾರ ಅಕ್ಷರಶಃ ಗಗನಕ್ಕೇರಿವೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಒಂದೇ ದಿನದಲ್ಲಿ ಭರ್ಜರಿ 12,550 ರೂ ಏರಿಕೆ ದಾಖಲಾಗಿದ್ದು, ಇತ್ತೀಚಿನ ವರ್ಷಗಳಲ್ಲೇ ಇದು ಅತಿಹೆಚ್ಚು ಏರಿಕೆಯಾಗಿದೆ. ಆಭರಣ ಚಿನ್ನದ ಬೆಲೆ ಮೊದಲ ಬಾರಿಗೆ 16,000 ರೂ ಗಡಿ ದಾಟಿದ್ದು, ಅಪರಂಜಿ ಚಿನ್ನದ ಬೆಲೆ 17,000 ರೂ ಮೈಲಿಗಲ್ಲು ದಾಟಿ 18,000 ರೂನತ್ತ ವೇಗವಾಗಿ ಸಾಗುತ್ತಿದೆ.

ಇನ್ನೊಂದೆಡೆ ಬೆಳ್ಳಿ ಬೆಲೆಯೂ ಭಾರೀ ಜಿಗಿತ ಕಂಡಿದ್ದು, ಒಂದೇ ದಿನ ಪ್ರತಿ ಗ್ರಾಂಗೆ 30 ರೂ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಮೊದಲ ಬಾರಿಗೆ 400 ರೂ ಗಡಿ ದಾಟಿ 410 ರೂ ತಲುಪಿದೆ. ಸದ್ಯ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,63,950 ರೂ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,78,850 ರೂ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 41,000 ರೂ ಇದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 1,63,950 ರೂ ಆಗಿದ್ದರೆ, 100 ಗ್ರಾಂ ಬೆಳ್ಳಿ ಬೆಲೆ 41,000 ರೂ ಇದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಬೆಳ್ಳಿ ಬೆಲೆ 42,500 ರೂ ತಲುಪಿದೆ.

ಜನವರಿ 29ರ ಸ್ಥಿತಿಗೆ ಭಾರತದಲ್ಲಿನ ಚಿನ್ನ–ಬೆಳ್ಳಿ ದರದ ವಿವರ ಹೀಗಿದೆ: 24 ಕ್ಯಾರಟ್ ಚಿನ್ನ ಪ್ರತಿ ಗ್ರಾಂಗೆ 17,885 ರೂ, 22 ಕ್ಯಾರಟ್ ಚಿನ್ನ 16,395 ರೂ, 18 ಕ್ಯಾರಟ್ ಚಿನ್ನ 12,146 ರೂ, ಬೆಳ್ಳಿ ಪ್ರತಿ ಗ್ರಾಂಗೆ 410 ರೂ ಇದೆ.

ಬೆಂಗಳೂರಿನಲ್ಲೂ ಇದೇ ದರಗಳು ಅನ್ವಯವಾಗುತ್ತಿದ್ದು, 24 ಕ್ಯಾರಟ್ ಚಿನ್ನ 17,885 ರೂ, 22 ಕ್ಯಾರಟ್ ಚಿನ್ನ 16,395 ರೂ, ಬೆಳ್ಳಿ 410 ರೂ ಆಗಿದೆ.

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಪ್ರತಿ ಗ್ರಾಂ ಬೆಲೆ: ಬೆಂಗಳೂರು 16,395 ರೂ, ಚೆನ್ನೈ 16,800 ರೂ, ಮುಂಬೈ 16,395 ರೂ, ದೆಹಲಿ 16,410 ರೂ, ಕೋಲ್ಕತಾ 16,395 ರೂ, ಕೇರಳ 16,395 ರೂ, ಅಹ್ಮದಾಬಾದ್ 16,400 ರೂ, ಜೈಪುರ್ 16,410 ರೂ, ಲಕ್ನೋ 16,410 ರೂ, ಭುವನೇಶ್ವರ್ 16,395 ರೂ ಆಗಿದೆ.