1.4 C
Munich
Home News ಬೆಂಗಳೂರು : ಮೆಟ್ರೋ ಪ್ರಯಾಣ ದರ ಏರಿಕೆಗೆ ಆಕ್ರೋಶ: ಕನ್ನಡಪರ ಸಂಘಟನೆಗಳ ವಿನೂತನ ಪ್ರತಿಭಟನೆ

ಬೆಂಗಳೂರು : ಮೆಟ್ರೋ ಪ್ರಯಾಣ ದರ ಏರಿಕೆಗೆ ಆಕ್ರೋಶ: ಕನ್ನಡಪರ ಸಂಘಟನೆಗಳ ವಿನೂತನ ಪ್ರತಿಭಟನೆ

ಬೆಂಗಳೂರು,ಫೆಬ್ರವರಿ,6,2026 : ಮೆಟ್ರೋ ಪ್ರಯಾಣ ದರ ಏರಿಕೆಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿವೆ.

ಬಿಎಂಆರ್ ಸಿಎಲ್ ಶೇ 5ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆಗೆ ಆದೇಶ ಹೊರಡಿಸಿದ್ದು ಫೆಬ್ರವರಿ 9 ರಿಂದ ಇದು ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ದರ ಏರಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಶಾಂತಿನಗರದಲ್ಲಿರುವ ಬಿಎಂಆರ್ ಸಿಎಲ್ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಯತ್ನಿಸಿದರು.

ದಿನನಿತ್ಯ ಬಳಕೆ ವಸ್ತುಗಳಾದ ಅಕ್ಕಿ ಬೇಳೆ, ಹಾಲು, ಸೋಪು, ಕೋಳಿಯನ್ನು ತಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತ ಕನ್ನಡಪರ ಸಂಘಟನೆಗಳು ನಮ್ಮ ಬಳಿ ದುಬಾರಿ ಟಿಕೆಟ್ ಕೊಳ್ಳಲು ಹಣವಿಲ್ಲ ದಿನಸಿ ವಸ್ತಗಳನ್ನ ತೆಗೆದುಕೊಂಡು ಟಿಕೆಟ್ ನೀಡಿ ಎಂದು ವಿನೂತನವಾಗಿ ಪ್ರತಿಭಟಿಸಿದರು.

error: Content is protected !!