ಬೆಂಗಳೂರು : ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕೊನೆಯ ಹಂತಕ್ಕೆ ಕಾಲಿಟ್ಟಿದೆ. ಫೈನಲ್ ವಾರ ಆರಂಭವಾಗಿದ್ದು, ದೊಡ್ಮನೆಯೊಳಗೆ ಉಳಿದಿರುವುದು ಕೇವಲ ಏಳು ಮಂದಿ ಸ್ಪರ್ಧಿಗಳು ಮಾತ್ರ. ಇತ್ತೀಚೆಗೆ ರಾಶಿಕಾ ಶೆಟ್ಟಿ ಎಲಿಮಿನೇಟ್ ಆಗಿ ಮನೆಯಿಂದ ಹೊರನಡೆದಿದ್ದಾರೆ.
ಪ್ರಸ್ತುತ ಜಿಯೋ ಹಾಟ್ಸ್ಟಾರ್ನಲ್ಲಿ ವೋಟಿಂಗ್ ಲೈನ್ ತೆರೆಯಲ್ಪಟ್ಟಿದ್ದು, ಜನವರಿ 13ರ ಸಂಜೆವರೆಗೆ ಮತ ಹಾಕಲು ಅವಕಾಶ ನೀಡಲಾಗಿದೆ.
ಈಗ ದೊಡ್ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳು:
ರಕ್ಷಿತಾ ಶೆಟ್ಟಿ
ಗಿಲ್ಲಿ ನಟ
ಕಾವ್ಯಾ ಶೈವ
ಧನುಶ್
ಧ್ರುವಂತ್
ರಘು
ಅಶ್ವಿನಿ ಗೌಡ
ಇವರಲ್ಲಿ ಧನುಶ್ ನೇರವಾಗಿ ಟಾಪ್ 6ಕ್ಕೆ ಪ್ರವೇಶ ಪಡೆದಿದ್ದಾರೆ. ಉಳಿದ ಆರು ಮಂದಿ ನೇರ ನಾಮಿನೇಷನ್ನಲ್ಲಿ ಇದ್ದಾರೆ.
ಈ ಆರು ಜನರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರ ಹೋಗಲಿದ್ದಾರೆ. ಮಂಗಳವಾರ ರಾತ್ರಿ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದ್ದು, ಅದರ ಫಲಿತಾಂಶ ಬುಧವಾರದ ಎಪಿಸೋಡ್ನಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ. ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.
ಪ್ರಸ್ತುತ ವೋಟಿಂಗ್ ಲೈನ್ನಲ್ಲಿ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ ಶೈವ, ಧ್ರುವಂತ್, ರಘು ಹಾಗೂ ಅಶ್ವಿನಿ ಗೌಡ ಅವರ ಹೆಸರುಗಳಿದ್ದು, ಮಂಗಳವಾರ ಸಂಜೆ 6 ಗಂಟೆವರೆಗೆ ಮಾತ್ರ ಮತ ಹಾಕಬಹುದು.
ಆದರೆ, ಈ ಮತಗಳನ್ನು ಫಿನಾಲೆಗೆ ಪರಿಗಣಿಸಲಾಗುವುದಿಲ್ಲ. ಇವು ಕೇವಲ ಮಧ್ಯವಾರದ ಎಲಿಮಿನೇಷನ್ಗಾಗಿ ಮಾತ್ರ ಮಾನ್ಯ. ಇದಾದ ಬಳಿಕ, ಬುಧವಾರ ರಾತ್ರಿ ಫಿನಾಲೆ ವಾರದ ವೋಟಿಂಗ್ ಲೈನ್ ಆರಂಭವಾಗುವ ಸಾಧ್ಯತೆ ಇದೆ.










