ಬೇಲೂರು :ವಿಶ್ವಪ್ರಸಿದ್ಧ ಹೊಯ್ಸಳರ ಶಿಲ್ಪಕಲೆಯ ನಾಡು ಬೇಲೂರು-ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುವ ಕೇಶವನ ಕ್ಷೇತ್ರಕ್ಕೆ ಅಷ್ಟೇ ಅಲ್ಲದೆ ಶಿಲ್ಪಕಲಾ ಪ್ರಿಯರಿಗೆ ಮತ್ತು ಪ್ರವಾಸಿಗರಿಗೆ ಸ್ವರ್ಗವಾಗಿದೆ.
ಆದರೆ ‘ಪಾರ್ಕಿಂಗ್’ ಎಂಬ ದೊಡ್ಡ ಹೆಮ್ಮಾರಿ ಬೇಲೂರು ಜನತೆಯ ನೆಮ್ಮದಿ ಹಾಳು ಮಾಡಿದೆ ಮೂಲಭೂತ ಸೌಲಭ್ಯವೇ ಜನರಿಗೆ ಕಂಟಕವಾಗಿ ಪರಿಣಮಿಸಿದೆ.
ಸರಿಯಾದ ಪಾರ್ಕಿಂಗ್ ಸ್ಥಳ ವ್ಯವಸ್ಥೆ ಇದ್ದರೂ ದೇವಾಲಯದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಪ್ರವಾಸಿಗರು ಸಂಬಂಧಪಟ್ಟವರಿಗೆ ಛೀಮಾರಿಯಾಕುತ್ತಿದ್ದಾರೆ, ದೇವಾಲಯ ಸಿಬ್ಬಂದಿಯೇ ಪಾರ್ಕಿಂಗ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವುದು ಇದೀಗ ದೊಡ್ಡ ಆರೋಪವಾಗಿ ಹೊರಬಿದ್ದಿದೆ.
ಜಗತ್ಪ್ರಸಿದ್ಧ ಶ್ರೀ ಚನ್ನಕೇಶ್ವರ ದೇವಾಲಯ ವೀಕ್ಷಣೆಗೆ ಬರುವ ಪ್ರವಾಸಿಗರು ಬೇಲೂರಿಗೆ ಬಂದ ತಕ್ಷಣ ಇದು ಪಾರ್ಕಿಂಗ್ ಶುಲ್ಕವೇ? ಅಥವಾ ಬೇಲೂರಿಗೆ ಬಂದ ತಪ್ಪಿಗೆ ವಿಧಿಸುವ ದಂಡವೇ? ಎಂದು ಗಾಬರಿಗೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ.
ಕಾರಣ ದೇವಾಲಯದ ಮುಂಭಾಗಕ್ಕೆ ಬಂದ ತಕ್ಷಣವೇ ಸಿಬ್ಬಂದಿಗಳು ವಾಹನಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಮನಬಂದಂತೆ ಪಾರ್ಕಿಂಗ್ ಸುಂಕವನ್ನು ವಿಧಿಸುತ್ತಿದ್ದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ ಇನ್ನೂ ಅಂತರ್ ರಾಜ್ಯ ಪ್ರವಾಸಿಗರ ವಾಹನಗಳಿಗೆ ನಿಗದಿತ ದರಕ್ಕಿಂತ ದುಪ್ಪಟ್ಟು ವಸೂಲಿ ಮಾಡುತ್ತಿದ್ದು, ಭಾಷೆ ಬಾರದ ಕಾರಣ ವಾಹನ ಸವಾರರಿಂದ ವಿಚಿತ್ರ ರೀತಿಯಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಗಂಭೀರ ಆರೋಪಗಳು ಹೆಚ್ಚಾಗುತ್ತಿದೆ.
ಇನ್ನೂ ಬೇಲೂರಿಗೆ ಆಗಮಿಸುವ ಅಂತರ್ ರಾಜ್ಯ ಪ್ರವಾಸಿಗರಿಗೆ ಯಾವುದೇ ಭದ್ರತೆ ಇಲ್ಲದೆ ಬೇಲೂರಿಗೆ ಬಂದದ್ದೇ ತಪ್ಪೇ?” ಎಂದು ಪ್ರವಾಸಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಾಲಯ ಸಿಬ್ಬಂದಿ ನಿರ್ಲಕ್ಷ್ಯ – ಜನರ ಬೇಸರ ಗರಿ ತಟ್ಟಿದೆ
ಪಾರ್ಕಿಂಗ್ ಗೊಂದಲಕ್ಕೆ ಸುಗಮ ಪರಿಹಾರ ನೀಡಬೇಕಾದ ದೇವಾಲಯದ ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ಕೇವಲ ಪ್ರವಾಸಿಗರಿಂದ ಹಣ ವಸೂಲಿ ಮಾಡುವುದರಲ್ಲಿ ತಲ್ಲಿನರಾಗಿದ್ದು ಶನಿವಾರ ಭಾನುವಾರ ಸಾವಿರಾರು ವಾಹನಗಳು ದೇಗುಲಕ್ಕೆ ಆಗಮಿಸುತ್ತಿದ್ದು ಪಾರ್ಕಿಂಗ್ ಲೆಕ್ಕ ಮಾತ್ರ ದೇಗುಲಕ್ಕೆ ಬೆಳ್ಳಣಿಕೆಯಷ್ಟು ನೀಡುತ್ತಿದ್ದು ಉಳಿದ ಹಣ ಎಲ್ಲಿ ಹೋಗುತ್ತಿದೆ ಎಂದು ದೇಗುಲದ ಸಮೀಪವಿರುವ ಜನರಿಗೆ ಅನುಮಾನ ಕಾಡುತ್ತಿದೆ ಜೊತೆಗೆ ಅಧಿಕಾರಿಗಳು ಕೈಕಟ್ಟಿಕೊಂಡಂತೆ ಮೌನವಾಗಿರುವುದು ಸಾರ್ವಜನಿಕರನ್ನು ಹೆಚ್ಚಾಗಿ ಕೋಪಗೊಳಿಸಿದೆ.
ಜಿಲ್ಲಾಧಿಕಾರಿಗಳಿಂದ ಪಾರ್ಕಿಂಗ್ ಕುರಿತು ಹಲವು ಕ್ರಮಗಳನ್ನು ಜಾರಿಗೊಳಿಸಿ ಸೂಚನೆ ಬಂದರೂ ‘ಕ್ಯಾರೆ ಇಲ್ಲ’ ಎನ್ನುವಂತೆ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವರ್ತನೆ ತೋರುತ್ತಿದ್ದು ಮುಂದಿನ ದಿನಗಳಲ್ಲಿ ಇದು ಯಾವ ಹಾದಿ ಹಿಡಿಯುತ್ತದೆ ಎಂದು ಕಾದು ನೋಡಬೇಕಾಗಿದೆ.
ನಯನ ಮನೋಹರ ಶ್ರೀ ಚನ್ನಕೇಶವ ಸ್ವಾಮಿ ತಾಣಕ್ಕೆ ಶ್ರೀ ಚನ್ನಕೇಶವನನ್ನು ನೋಡಲು ಮತ್ತು ಇಲ್ಲಿಯ ಶಿಲ್ಪ ಕಲೆಗಳನ್ನು ಆನಂದಿಸಲು ದೇಶ–ವಿದೇಶಗಳಿಂದ ಆಗಮಿಸುವವರ ಮೊದಲು ಕಂಡುಬರುವ ಅನುಭವವೇ ಪಾರ್ಕಿಂಗ್ ದಂಧೆ.
ಪ್ರವಾಸೋದ್ಯಮವನ್ನು ಉತ್ತೇಜಿಸುವ ಬದಲು ಜನರನ್ನು ಕೆಣಕುವ ಕೆಲಸ ಇಲ್ಲಿ ನಡೆಯುತ್ತಿರುವುದರ ಮೇಲೆ ತಕ್ಷಣದ ಕ್ರಮ ಅನಿವಾರ್ಯವಾಗಿದೆ ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ದೇವಾಲಯದ ಆಡಳಿತ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕಾದುನೋಡಬೇಕಿದೆ.
Belur, the land of world-famous Hoysala sculpture, is not only a paradise for art lovers and tourists, but also for the Keshavana Kshetra, which attracts thousands of tourists every day.










