ಬೆಂಗಳೂರು/ಬಾಗಲಕೋಟೆ ,ಫೆಬ್ರವರಿ,21,2026 (www.kannadapost.com): ಶಿವಾಜಿ ಮೆರವಣಿಗೆ ಮೇಲೆ ಕಲ್ಲು , ಚಪ್ಪಲಿ ತೂರಾಟ ಪ್ರಕರಣ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬಾಗಲಕೋಟೆ ಸಹಜ ಸ್ಥಿತಿಗೆ ಬಂದಿದೆ. ಪ್ರಕರಣ ಸಂಬಂಧ ಈಗಾಗಲೇ 8 ಜನರನ್ನ ಬಂಧಿಸಲಾಗಿದೆ ಎರಡು ಗುಂಪಿನವರು ಅರ್ಥ ಮಾಡಿಕೊಳ್ಳಬೇಕು. ಅಲ್ಲಿ ಶಾಂತಿ ಸಭೆ ನಡೆಸಲು ಸೂಚನೆ ನೀಡಿದ್ದೇನೆ ಎಂದರು.
ಸದ್ಯ ಪರಿಸ್ಥಿತಿ ಶಾಂತವಾಗಿದ್ದು ಯಾರನ್ನೂ ರಕ್ಷಣೆ ಮಾಡುವ ಸಂಧಾನ ಮಾಡುವ ಕೆಲಸವಿಲ್ಲ ಮುಂದೆ ಅಲ್ಲಿ ಬೈ ಎಲೆಕ್ಷನ್ ಕೂಡ ಬರುತ್ತದೆ ನಾವು ಒಂದು ವರ್ಗವನ್ನ ಸೀಮಿತಗೊಳಿಸಿಲ್ಲ. ಯಾರನ್ನೂ ನಾವು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.










