ಕರ್ನೂಲ್: ‘ಬಸ್‌ಗೆ ಬೆಂಕಿ ಹತ್ತುತ್ತಿದ್ದಂತೆ ಚಾಲಕ ಲಕ್ಷ್ಮಯ್ಯ ಪ್ರಯಾಣಿಕರ ಬಾಗಿಲಿನಿಂದ ಹೊರಗೆ ಹಾರಿ ತಪ್ಪಿಸಿಕೊಂಡಿದ್ದಾನೆ. ಪರಿಸ್ಥಿತಿಯನ್ನು ಅವಲೋಕಿಸುವಲ್ಲಿ ಆತ ವಿಫಲನಾಗಿದ್ದಾನೆ. ಎಂದು ‘ಕರ್ನೂಲ್ ಬಸ್ ದುರಂತ’ದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ್ದಾರೆ.
‘ಕೆಳಗೆ ಇಳಿದವನೇ ಬಸ್‌ನ ಕೆಳಗೆ ಮುಂದಿನ ಚಕ್ರ ಮತ್ತು ಹಿಂದಿನ ಚಕ್ರದ ನಡುವೆ ಇರುವ ಲಗೇಜ್ ರ್ಯಾಕ್‌ನಲ್ಲಿ ಮಲಗಿದ್ದ ಇನ್ನೊಬ್ಬ ಚಾಲಕನನ್ನು ಎಬ್ಬಿಸಿದ್ದಾನೆ’ ಎಂದು ಅವರು ತಿಳಿಸಿದ್ದಾರೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ವಿ.ಕಾವೇರಿ ಟ್ರಾವೆಲ್ ಗೆ ಸೇರಿದ ಬಸ್ಸೊಂದು ಶುಕ್ರವಾರ ಬೆಳಗಿನ ಜಾವ ಕರ್ನೂಲ್ ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ ಹೊತ್ತಿ ಉರಿದಿತ್ತು. ದುರಂತದಲ್ಲಿ 20 ಜನರು ಸಜೀವ ದಹನಗೊಂಡಿದ್ದರು.










