ಹಾಸನ: ಹಳೇಬೀಡಿನ ಎಸ್‌ಜಿ‌ಆರ್ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನ ಆಚರಣೆ

As part of the celebration of National Mathematics Day, a forum program on mathematics was organized at SGR Public School, Halebid, along with an exhibition of mathematics demonstrations.

ಹಾಸನ: ರಾಷ್ಟ್ರೀಯ ಗಣಿತ ದಿನದ ಆಚರಣೆಯ ಅಂಗವಾಗಿ ಹಳೇಬೀಡಿನ ಎಸ್ ಜಿ ಆರ್ ಪಬ್ಲಿಕ್ ಶಾಲೆಯಲ್ಲಿ ಗಣಿತ ವಿಷಯದ ಕುರಿತು ವೇದಿಕೆ ಕಾರ್ಯಕ್ರಮದ ಜೊತೆಗೆ ಗಣಿತ ಪ್ರಾತ್ಯಕ್ಷಿಕೆಗಳ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಜಿ ಆರ್ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಹೆಚ್ ಆರ್ ಸುರೇಶ್ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಖಜಾಂಚಿ ಶ್ರೀಮತಿ ‌ಮಂಜುಳ ಸುರೇಶ್ ರವರು ನೆರವೇರಿಸಿದರು.

ಪ್ರಾಸ್ತಾವಿಕ ನುಡಿಯಲ್ಲಿ ರಾಷ್ಟ್ರೀಯ ಗಣಿತ ಆಚರಣೆಯ ಉದ್ದೇಶ ಹಾಗೂ ಶ್ರೀನಿವಾಸನ್ ರಾಮಾನುಜನ್ ರವರ ಜೀವನ ಚರಿತ್ರೆಯನ್ನು ಗಣಿತ ಶಿಕ್ಷಕಿ ಶ್ರೀಮತಿ ತನುಜ ಕಾರ್ಯಕ್ರಮದಲ್ಲಿ ಸವಿವರವಾಗಿ ತಿಳಿಸಿದರು.

ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಶ್ರೀ ಸಿದ್ದೇಶ್ ಜಿ ಎನ್ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಮಮತಾ ಬಿ ಎಲ್ ರಾಮಾನುಜನ್ ಅವರ ಕುರಿತು ಹಾಗೂ ಹಿರಿಯ ಗಣಿತ ಶಿಕ್ಷಕಿ ಜಹೀದ್ ಉನ್ನಿಸಾ ಇಂಡೋ-ಅರೇಬಿಕ್ ಅಂಕಿಗಳ ಮಹತ್ವದ ವಿಚಾರವನ್ನು ತಿಳಿಸಿದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿ, ನಿರೂಪಿಸಿದವರು ಮತ್ತೊಬ್ಬ ಗಣಿತ ಶಿಕ್ಷಕಿ ಕುಮಾರಿ ಜಿ ಕೆ ನಿರೀಕ್ಷಾ ಹಾಗೂ ಅವರೊಂದಿಗೆ ಮತ್ತಿಬ್ಬರು ಗಣಿತ ಶಿಕ್ಷಕಿಯರಾದ ಶ್ರೀಮತಿ ರಾಧ ಎಮ್ ಮತ್ತು ಕುಮಾರಿ ಭೂಮಿಕಾ ಸಿ ಎಮ್ ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ಸ್ವಾಗತಿಸಿ, ವಂದಿಸಿದರು. ತರಗತಿ ಶಿಕ್ಷಕಿಯರ ಸಹಕಾರದಿಂದ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂದಿತು.

As part of the celebration of National Mathematics Day, a forum program on mathematics was organized at SGR Public School, Halebid, along with an exhibition of mathematics demonstrations.