ಉಡುಪಿ: ಧರ್ಮಸ್ಥಳ ಕ್ಷೇತ್ರದ ಖ್ಯಾತಿಗೆ ಧಕ್ಕೆ ತರುವ ಅಪವಾದಗಳು ಮೇಲಿಂದ ಮೇಲೆ ಬರುತ್ತಿರುವುದೇ? ಅದಕ್ಕೆ ಪರಿಹಾರವೇನು? ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಈ ಬಗ್ಗೆ ಈ ರೀತಿ ಬರೆದಿದ್ದಾರೆ.
ಇದು ಸತ್ಯ ವಿಚಾರ ಇದೆ.ಧರ್ಮಸ್ಥಳದ ಮಂಜುನಾಥೇಶ್ವರನ ಪುನಃ ಪ್ರತಿಷ್ಠೆ ಮಾಡಿದ ಏಕೈಕ ವೈಷ್ಣವ ಯತಿ ಶ್ರೀ ಶ್ರೀ ಶ್ರೀ ವಾದಿರಾಜರು.ಭಾವೀ ಸಮೀರರೆಂದೇ ಇತಿಹಾಸದಲ್ಲಿ ಉಲ್ಲೇಖ ಇದೆ.ಎಲ್ಲಿ ವಾದಿರಾಜರು ನಡೆದಾಡುವರೋ ಅವರ ಜತೆಗೇ ಭೂತರಾಜರು( ಭಾವೀ ರುದ್ರದೇವರು) ಇರುತ್ತಾರೆ.ಆದರೆ ವಾದಿರಾಜ ಪರಂಪರೆಯ ಮೂವತ್ತಮೂರನೆಯ ಗುರುಗಳಾದ ವಿಶ್ವೋತ್ತಮ ತೀರ್ಥರು ಧರ್ಮಸ್ಥಳಕ್ಕೆ ವಿಮುಖರಾದರೋ( ಅನೇಕ ಕಾರಣಗಳಿವೆ .ಅವರಿಗೆ ಅಗೌರವಗಳಾಗಿವೆ. ಅವರು ನೊಂದುಕೊಳ್ಳಲು.ನನ್ನಲ್ಲೇ ಒಮ್ಮೆ ಹೇಳಿದ್ದರು)ಅಂದಿನಿಂದ ಇದು ಗುರು ಶಾಪವೇ ಆಗಿದೆ.
ವಿಶ್ವೋತ್ತಮ ತೀರ್ಥರು ವಾದಿರಾಜರ ಪುನರಾವತಾರ ಎಂದೇ ಪ್ರಖ್ಯಾತಿ.ನಿಸ್ವಾರ್ಥ,ಫಲಾಪೇಕ್ಷೆ ಬಯಸದ ಕರುಣಾಳು ಮೂರ್ತಿ ಯಾವಾಗ ನೊಂದುಕೊಂಡರೋ ಅಂದಿನಿಂದ ಧರ್ಮಸ್ಥಳದಲ್ಲಿ ಒಂದಲ್ಲ ಒಂದು ರೀತಿಯ ಅಪವಾದಗಳು ಬರತೊಡಗಿದವು.
ಈಗಿನ ಸೋದೆಯ ಯತಿಗಳನ್ನು ಕರೆಸಿ ದೇವರಿಗೆ ಅರ್ಚನೆ ಮಾಡಿಸಿ,ಭೂತರಾಜರಿಗೆ ಫಲ ಸಮರ್ಪಣೆ ಮಾಡುವಲ್ಲಿಯ ವರೆಗೆ ಈ ತಕರಾರು ನಿಲ್ಲೋದು ಕಷ್ಟ.ಯತಿಗಳಿಗೆ ಬೇರೇನೂ ಬೇಡ.ಅವರಿಗೆ ಶರಣಾದರೆ ಸಾಕು.
ಅನುಗ್ರಹ ನೀಡಿಯೇ ನೀಡುತ್ತಾರೆ.ಇದು ಕೇವಲ ಅಗೌರವ,ಪ್ರತಿಷ್ಟೆಗಳಿಂದ ಮಾತ್ರ ವಿಮುಖರಾದದ್ದೇ ವಿನಃ ಬೇರಾವ ಬೇಡಿಕೆಗಳಿಂದಾದದ್ದಲ್ಲ. ನಮಗೆ ಆ ಪರಂಪರೆ,ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ,ಬರುವ ಭಕ್ತಾದಿಗಳಿಗೆ ಕ್ಷೇಮ ಆದರೆ ಇನ್ನೇನೂ ಬೇಕಿಲ್ಲ.
ದೇಶಕ್ಕೆ ಧರ್ಮಸ್ಥಳದ ಕೊಡುಗೆಯನ್ನು ನಾವು ಎಂದಿಗೂ ಮರೆಯಲಾಗದು.ಅದೇ ರೀತಿ ಸೋದೆ ಮಠದ ವಾದಿರಾಜ ಯತಿಗಳಿಗೆ,ಮಠಕ್ಕೆ ಗೌರವ ಸ್ಮರಣೆಯನ್ನೂ ಅಲ್ಲಿನ ಆಡಳಿತ ಧರ್ಮಾಧಿಕಾರಿಗಳು ಕೊಡಬೇಕು.ಇಷ್ಟೇ ವಿಚಾರ ಇರೋದು.










