5.9 C
Munich
Home News ‘ಡಾಲಿ ಪಿಕ್ಚರ್ಸ್’ ನಿರ್ಮಾಣದ ಹೊಸ ಸಿನಿಮಾ ‘ಜೆಸಿ’; ರ್ಯಾಪ್ ಸಾಂಗ್ ಮೂಲಕ ಪ್ರಖ್ಯಾತ್ ಮಿಂಚು

‘ಡಾಲಿ ಪಿಕ್ಚರ್ಸ್’ ನಿರ್ಮಾಣದ ಹೊಸ ಸಿನಿಮಾ ‘ಜೆಸಿ’; ರ್ಯಾಪ್ ಸಾಂಗ್ ಮೂಲಕ ಪ್ರಖ್ಯಾತ್ ಮಿಂಚು

Another movie produced by famous actor Dolly Dhananjaya under the banner of Dolly Pictures is ready for release. The shooting of the movie JC, produced by Dolly Pictures, has been completed and is now in front of the fans through a rap song.

ಬೆಂಗಳೂರು: ಖ್ಯಾತ ನಟ ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ನಿರ್ಮಾಣದಲ್ಲಿ ತಯಾರಾದ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಡಾಲಿ ಪಿಕ್ಚರ್ಸ್ ನಿರ್ಮಾಣದ ಜೆಸಿ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು ಸದ್ಯ ಒಂದು ರ್ಯಾಪ್ ಸಾಂಗ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ.

ಜೆಸಿ, ಪ್ರಖ್ಯಾತ್ ನಾಯಕನಾಗಿ ನಟಿಸಿರವ ಸಿನಿಮಾ. 2018ರಲ್ಲಿ ಬಿಡುಗಡೆಯಾದ ‘ನಡುವೆ ಅಂತರವಿರಲಿ’ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ್ದ ಪ್ರಖ್ಯಾತ್ ದೊಡ್ಡ ಗ್ಯಾಪ್​ನ ನಂತರ ಮತ್ತೆ ಸಿನಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಇದೀಗ ಬೈಕ್ ಏರಿ ರ್ಯಾಂಪ್ ಸಾಂಗ್ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ‘ವ್ರೂಮ್..ವ್ರೂಮ್…ರೋಡ್ ಮೇಲೆ ಬೀಸ್ಟ್ ಬಂತು ಸೈಡ್ ಕೊಡು…’ ಎನ್ನುವ ರ್ಯಾಪ್ ಸಾಂಗ್ ಅನ್ನು ಖ್ಯಾತ ರ್ಯಾಪರ್‌ಗಳಾದ ಎಮ್ ಸಿ ಬಿಜ್ಜು ಮತ್ತು ರಾಹುಲ್ ಡಿಟ್ಟೋ ಅವರು ಬರೆದು, ಸಂಗೀತ ನೀಡಿ ಅವರೇ ಹಾಡಿದ್ದಾರೆ. ಕೇಳಿಕೆ ಸಿಕ್ಕಾಪಟ್ಟೆ ಮಜವಾಗಿರುವ ಈ ಹಾಡು ಬೈಕರ್ಗಳ ಆಂಥಮ್ ಎನ್ನುತ್ತಾರೆ ಸಿನಿಮಾತಂಡ..

ಸದ್ಯ ಹಾಡಿನ ಮೂಲಕ ಪ್ರಮೋಷನ್ ಪ್ರಾರಂಭ ಮಾಡಿರುವ ಜೆಸಿ ಸಿನಿಮಾತಂಡ ಟ್ರೈಲರ್ ರಿಲೀಸ್‌ಗೆ ಪ್ಲಾನ್ ಮಾಡುತ್ತಿದೆ. ಅಂದಹಾಗೆ ಜೆಸಿ ಎಂದರೆ ಈಗಾಗಲೇ ಗೊತ್ತಿರುವ ಹಾಗೆ ಜುಡಿಷಿಯಲ್ ಕಸ್ಟಡಿ.. ಜೈಲಿಂದ ಹೊರಗೆ ಬಂದಿರುವ ಯುವಕನ ಕಹಾನಿ ಈ ಸಿನಿಮಾದಲ್ಲಿ ಇರಲಿದೆ.

ಈ ಸಿನಿಮಾಗೆ ಚೇತನ್ ಜೈರಾಮ್ ಆಕ್ಷನ್-ಕಟ್ ಹೇಳಿದ್ದಾರೆ. ಪ್ರಖ್ಯಾತ್ ಜೊತೆಯಾಗಿ ನವ ನಾಯಕಿ ಬಾವನ ಅಭಿನಯ ಮಾಡುತ್ತಿದ್ದಾರೆ ಚೇತನ್ ಅವರಿಗೆ ಇದು ಮೊದಲ ಸಿನಿಮಾ. ಖ್ಯಾತ ಡೈಲಾಗ್ ರೈಟರ್ ಮಾಸ್ತಿ ಅವರು ‘ಜೆಸಿ’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಇದು ಪಕ್ಕಾ ಮಾಸ್ ಕಥಾಹಂದರ ಇರುವ ಸಿನಿಮಾವಾಗಿದೆ. ಕಾರ್ತಿಕ್ ಛಾಯಾಗ್ರಾಹಣ, ರೋಹಿತ್ ಸೋವರ್ ಸಂಗೀತ ನಿರ್ದೇಶನವಿದೆ.

error: Content is protected !!